ಭದ್ರತಾ ಪಡೆಯ ಸಾಂದರ್ಭಿಕ ಚಿತ್ರ
ದೇಶ
ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕ್ ಪ್ರಜೆ ಬಂಧನ: 6 ಕೆಜಿ ಹೆರಾಯಿನ್ ವಶ
ಭಾರತ- ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಸ್ಮಗ್ಲರ್ ಒಬ್ಬನನ್ನು ಭಾನುವಾರ ಬಂಧಿಸಿರುವ ಬಿಎಸ್ಎಫ್ ಯೋಧರು, ಆತನಿಂದ ಆರು ಕೆಜಿ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ.
ಅಮೃತಸರ: ಭಾರತ- ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಸ್ಮಗ್ಲರ್ ಒಬ್ಬನನ್ನು ಭಾನುವಾರ ಬಂಧಿಸಿರುವ ಬಿಎಸ್ಎಫ್ ಯೋಧರು, ಆತನಿಂದ ಆರು ಕೆಜಿ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ.
ಇಂಡೋ-ಪಾಕ್ ಗಡಿ ಪ್ರದೇಶ ರಾಜಟಲ್ ಗ್ರಾಮದಲ್ಲಿ ಮುಳ್ಳು ಬೇಲಿಯತ್ತ ವ್ಯಕ್ತಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿರುವುದನ್ನು ಬಿಎಸ್ ಎಫ್ ಗಸ್ತು ಸಿಬ್ಬಂದಿ ಶನಿವಾರ ಗಮನಿಸಿದ್ದಾರೆ.
ಶೋಧ ಕಾರ್ಯಾಚರಣೆ ವೇಳೆಯಲ್ಲಿ ಪಾಕಿಸ್ತಾನದ ಪ್ರಜೆಯೊಬ್ಬವನ್ನು ಬಿಎಸ್ ಎಫ್ ಸಿಬ್ಬಂದಿ ಬಂಧಿಸಿದ್ದು, ಆತನಿಂದ 6 ಕೆಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ ಎಂದು ಬಿಎಸ್ ಎಫ್ ಡಿಐಜಿ ಭೂಪೀಂದರ್ ಸಿಂಗ್ ತಿಳಿಸಿದ್ದಾರೆ.
ಪಾಕಿಸ್ತಾನದ ಪ್ರಜೆಯನ್ನು ಲಾಹೋರ್ ನಿವಾಸಿ ಕಾಶಿ ಅಲಿ ಎಂದು ಗುರುತಿಸಲಾಗಿದೆ. ಮುಂದಿನ ವಿಚಾರಣೆ ಪ್ರಗತಿಯಲ್ಲಿದೆ ಎಂದು ಡಿಐಜಿ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ