ಲಖಿಂಪುರ ಹಿಂಸಾಚಾರ: ನ್ಯಾಯದ ಹೋರಾಟದಲ್ಲಿ ರೈತರಿಗೆ ಗೆಲುವು ಎಂದ ರಾಹುಲ್ ಗಾಂಧಿ

ನ್ಯಾಯಕ್ಕಾಗಿ, ಸತ್ಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ರೈತ ಸಮುದಾಯಕ್ಕೆ ಅಂತಿಮ ವಿಜಯ ಲಭಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ನ್ಯಾಯಕ್ಕಾಗಿ, ಸತ್ಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ರೈತ ಸಮುದಾಯಕ್ಕೆ ಅಂತಿಮ ವಿಜಯ ಲಭಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ನಡೆದ ರೈತರ ಮಾರಣಹೋಮದ ಘಟನೆ ನಂತರ ಅವರು ಈ ವಿಷಯ ತಿಳಿಸಿದ್ದು ಉತ್ತರಪ್ರದೇಶ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ರೈತರ ಹೆಸರಿನಲ್ಲಿ ಹೊಸಲು ರಾಜಕಾರಣ ಮಾಡಿಕೊಂಡು ರೈತರ ಮೇಲೆ ನಿತ್ಯವೂ ದಬ್ಬಾಳಿಕೆ ನಡೆಸುತ್ತಿದೆ ಇದು ಬಹಳ ದಿನ ನಡೆಯುವುದಿಲ್ಲ, ಅಂತಿಮವಾಗಿ ಈ ಹೋರಾಟದಲ್ಲಿ ರೈತ ಸಮುದಾಯಕ್ಕೆ ವಿಜಯ ಲಭಿಸಲಿದೆ ಎಂದರು. 

ರೈತ ಕುಟುಂಬಗಳಿಗೆ ಸಾಂತ್ವನ ಹೇಳಲು ಹೋಗಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರೊಂದಿಗೆ ಯುಪಿ ಪೊಲೀಸರು ಅನುಚಿತವಾಗಿ ನಡೆದುಕೊಂಡಿರುವುದು ಖಂಡನೀಯ. ಇದು ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ. ಅಧಿಕಾರದಲ್ಲಿರುವ ಬಿಜೆಪಿ ನಾಯಕರು ಆಕೆಯ ಧೈರ್ಯಕ್ಕೆ ಹೆದರುತ್ತಿದ್ದಾರೆ ಎಂದು ರಾಹುಲ್ ದೂರಿದರು. 

'ಪ್ರಿಯಾಂಕಾ, ನೀವು ಹಿಮ್ಮೆಟ್ಟುವುದಿಲ್ಲ ಎಂದು ನನಗೆ ತಿಳಿದಿದೆ. ಅವರು ನಿಮ್ಮ ಧೈರ್ಯವನ್ನು ನೋಡಿ ಹೆದರುತ್ತಿದ್ದಾರೆ. ದೇಶದ 'ಅನ್ನದಾತರು' ನ್ಯಾಯಕ್ಕಾಗಿ ನಡೆಸುತ್ತಿರುವ ಈ ಅಹಿಂಸಾತ್ಮಕ ಹೋರಾಟದಲ್ಲಿ ಗೆದ್ದೆ ಗೆಲ್ಲುತ್ತಾರೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ, 'ದೇಶದಲ್ಲಿ ರೈತರನ್ನು ತುಳಿಯುವ ಮತ್ತು ಅವರನ್ನು ಮುಗಿಸುವ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

 ಪ್ರಿಯಾಂಕಾ ಗಾಂಧಿ ಮತ್ತು ಇತರ ಪಕ್ಷದ ನಾಯಕರನ್ನು ಸೋಮವಾರ ವಶಕ್ಕೆ ಪಡೆದಿದ್ದು, ಸೀತಾಪುರದ ಸರ್ಕಾರಿ ವಸತಿ ಗೃಹದಲ್ಲಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಹಿಂಸಾಚಾರದ ಸಂತ್ರಸ್ತರನ್ನು ಭೇಟಿಯಾಗಲು ಅವರಿಗೆ ಬಿಜೆಪಿ ಸರ್ಕಾರ ಅವಕಾಶ ನೀಡಿಲ್ಲ ಎಂದು ಪಕ್ಷ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com