'ಮಾನವ ನಿರ್ಮಿತ' ಬಂಗಾಳ ಪ್ರವಾಹಕ್ಕೆ ಶಾಶ್ವತ ಪರಿಹಾರ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದ ಮಮತಾ

ಜಾರ್ಖಂಡ್‌ನ ಅಣೆಕಟ್ಟುಗಳು ಮತ್ತು ಬ್ಯಾರೇಜ್‌ಗಳಿಂದ ನೀರ ಹರಿಬಿಟ್ಟಿದ್ದರಿಂದ ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮಮತಾ ಬ್ಯಾನರ್ಜಿ...
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಜಾರ್ಖಂಡ್‌ನ ಅಣೆಕಟ್ಟುಗಳು ಮತ್ತು ಬ್ಯಾರೇಜ್‌ಗಳಿಂದ ನೀರ ಹರಿಬಿಟ್ಟಿದ್ದರಿಂದ ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮಮತಾ ಬ್ಯಾನರ್ಜಿ ಅವರು, 'ಮಾನವ ನಿರ್ಮಿತ' ಬಂಗಾಳ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಧಾನಿಗೆ ಬರೆದ ನಾಲ್ಕು ಪುಟಗಳ ಪತ್ರದಲ್ಲಿ, ಪಶ್ಚಿಮ ಬಂಗಾಳ ಪ್ರವಾಹ "ಮಾನವ ನಿರ್ಮಿತ" ಮತ್ತು "ಅನಿಯಂತ್ರಿತ. ಯೋಜಿತವಲ್ಲದ" ಜಾರ್ಖಂಡ್ ನ ಪಂಚೆಟ್ ಮತ್ತು ಮೈಥಾನ್ ನಲ್ಲಿರುವ ಡಿವಿಸಿ ಅಣೆಕಟ್ಟೆಗಳಿಂದ ನೀರು ಹೊರ ಬಿಡುತ್ತಿರುವುದರಿಂದ ಈ ಪ್ರವಾಹ ಉಂಟಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಈ ಸಂಬಂಧ ಆಗಸ್ಟ್ 4 ರಂದು ಅವರು ಬರೆದ ಹಿಂದಿನ ಪತ್ರವನ್ನು ಉಲ್ಲೇಖಿಸಿರುವ ಮಮತಾ ಬ್ಯಾನರ್ಜಿ, "ದಕ್ಷಿಣ ಬಂಗಾಳದಲ್ಲಿ ಪದೇ ಪದೇ, ಮಾನವ ನಿರ್ಮಿತ ಪ್ರವಾಹ ಪರಿಸ್ಥಿತಿಗೆ ಜನ್ಮ ನೀಡುವ ರಚನಾತ್ಮಕ ಅಂಶಗಳನ್ನು ನಾನು ಹೈಲೈಟ್ ಮಾಡಿದ್ದೇನೆ" ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಮೂಲಭೂತವಾದ ರಚನಾತ್ಮಕ ಮತ್ತು ವ್ಯವಸ್ಥಾಪಕ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಮತ್ತು ದೀರ್ಘಾವಧಿಯಲ್ಲಿ ಪರಿಹರಿಸದ ಹೊರತು ಕೆಳಮಟ್ಟದಲ್ಲಿರುವ ನಮ್ಮ ರಾಜ್ಯಗಳಲ್ಲಿ ವಿಪತ್ತುಗಳು ನಿರಂತರವಾಗಿ ಮುಂದುವರಿಯುತ್ತವೆ ಎಂದು ದೀದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com