ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ರಾಜೀನಾಮೆ; ಅಕಾಡೆಮಿಗೆ ಮರಳಲು ನಿರ್ಧಾರ
ಹಣಕಾಸು ಸಚಿವಾಲಯದಲ್ಲಿ ಮೂರು ವರ್ಷ ಪೂರ್ಣಗೊಳಿಸಿದ ನಂತರ ತನ್ನ ಅಕಾಡೆಮಿಗೆ ಮರಳಲು ನಿರ್ಧರಿಸಿರುವುದಾಗಿ ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ ಸುಬ್ರಮಣಿಯನ್ ಶುಕ್ರವಾರ ಹೇಳಿದ್ದಾರೆ.
Published: 08th October 2021 07:54 PM | Last Updated: 09th October 2021 01:18 PM | A+A A-

ಕೆ.ವಿ. ಸುಬ್ರಮಣಿಯನ್
ನವದೆಹಲಿ: ಹಣಕಾಸು ಸಚಿವಾಲಯದಲ್ಲಿ ಮೂರು ವರ್ಷ ಪೂರ್ಣಗೊಳಿಸಿದ ನಂತರ ತನ್ನ ಅಕಾಡೆಮಿಗೆ ಮರಳಲು ನಿರ್ಧರಿಸಿರುವುದಾಗಿ ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ ಸುಬ್ರಮಣಿಯನ್ ಶುಕ್ರವಾರ ಹೇಳಿದ್ದಾರೆ.
ಹೈದರಾಬಾದಿನ ಐಎಸ್ ಬಿ ಪ್ರೊಫೆಸರ್ ಆಗಿದ್ದ ಸುಬ್ರಮಣಿಯನ್ ಅವರನ್ನು 2018 ಡಿಸೆಂಬರ್ ನಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕೇಂದ್ರ ಸರ್ಕಾರ ನೇಮಿಸಿತ್ತು. ಅರವಿಂದ್ ಸುಬ್ರಮಣಿಯನ್ ಅವರಿಂದ ತೆರವಾದ ಸ್ಥಾನಕ್ಕೆ ಸುಬ್ರಣಿಯನ್ ಅವರನ್ನು ಸರ್ಕಾರ ನೇಮಕ ಮಾಡಿತ್ತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸ್ಪೂರ್ತಿದಾಯಕ ನಾಯಕತ್ವ ಹಾಗೂ ಅವರ ಬೆಂಬಲಕ್ಕೆ ಧನ್ಯವಾದವನ್ನು ಸುಬ್ರಮಣಿಯನ್ ತಿಳಿಸಿದ್ದಾರೆ. ತಮ್ಮ ಮೂರು ವರ್ಷಗಳ ಅಧಿಕಾರವಧಿ ಪೂರ್ಣಗೊಂಡ ಬಳಿಕ ಮತ್ತೆ ಅಕಾಡೆಮಿಗೆ ವಾಪಸ್ಸಾಗಲು ನಿರ್ಧರಿಸಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ.