'ಲಖೀಂಪುರ ಖೇರಿ ಘಟನೆ ಭಯಾನಕ, ನೀವೇಕೆ ಮೌನವಾಗಿದ್ದೀರಿ? ಒಂದು ಅನುಕಂಪದ ಮಾತನ್ನು ನಾವು ನಿರೀಕ್ಷಿಸುತ್ತೇವೆ'

ಲಖೀಂಪುರ ಖೇರಿ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಏಕೆ ಮೌನವಹಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ಪ್ರಶ್ನಿಸಿದ್ದಾರೆ
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಲಖೀಂಪುರ ಖೇರಿ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಏಕೆ ಮೌನವಹಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ಪ್ರಶ್ನಿಸಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಲಖಿಂಪುರ ಖೇರಿ ಘಟನೆ ಭಯಾನಕವಾದದ್ದು. ಮೋದಿ ಜೀ, ನೀವೇಕೆ ಮೌನವಾಗಿದ್ದೀರಿ? ನಿಮ್ಮಿಂದ ಕೇವಲ ಒಂದು ಅನುಕಂಪದ ಮಾತನ್ನು ನಾವು ನಿರೀಕ್ಷಿಸುತ್ತೇವೆ. ಅದು ಕಷ್ಟವಾಗಬಾರದು’ ಎಂದು ಹೇಳಿದ್ದಾರೆ.

‘ನೀವು ವಿರೋಧ ಪಕ್ಷದಲ್ಲಿ ಇದ್ದಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ? ದಯವಿಟ್ಟು ನಮಗೆ ತಿಳಿಸಿ’ ಎಂದು ಅವರು ಕೇಳಿದ್ದಾರೆ. ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಸಿಬಲ್‌ ಅವರು ಈ ವಾರದ ಆರಂಭದಲ್ಲಿ ಸುಪ್ರೀಂ ಕೋರ್ಟ್‌ ಅನ್ನು ಆಗ್ರಹಿಸಿದ್ದರು. 

ಈ ಕುರಿತು ಸುಪ್ರೀಂಕೋರ್ಟ್‌ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರಿಂದ ಸಿಬಲ್‌ ಅವರು ಮುಖ್ಯ ನ್ಯಾಯಮೂರ್ತಿಗೆ ಧನ್ಯವಾದ ಅರ್ಪಿಸಿದ್ದಾರೆ. ಭಾರತದಲ್ಲಿ ನ್ಯಾಯಾಲಯಗಳು ಧ್ವನಿ ಇಲ್ಲದವರ ನಂಬಿಕೆಯನ್ನು ಪುನಃ ಸ್ಥಾಪಿಸುವ ದೇವಾಲಯಗಳಾಗಿವೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com