ವಿದ್ಯುತ್ ಬಿಕ್ಕಟ್ಟು: ಪವರ್ ಸ್ಥಾವರಗಳಲ್ಲಿ ಕೇವಲ ಒಂದು ದಿನದ ಕಲ್ಲಿದ್ದಲು ದಾಸ್ತಾನು ಇದೆ ಎಂದ ದೆಹಲಿ ಸಚಿವ

ರಾಷ್ಟ್ರ ರಾಜಧಾನಿಯಲ್ಲಿ ತೀವ್ರ "ವಿದ್ಯುತ್ ಬಿಕ್ಕಟ್ಟು" ಸೃಷ್ಟಿಯಾಗಿದ್ದು, ದೆಹಲಿ ಇಂಧನ ಸಚಿವ ಸತ್ಯೇಂದ್ರ ಜೈನ್ ಅವರು ಶನಿವಾರ ವಿದ್ಯುತ್ ವಿತರಣಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತೀವ್ರ "ವಿದ್ಯುತ್ ಬಿಕ್ಕಟ್ಟು" ಸೃಷ್ಟಿಯಾಗಿದ್ದು, ದೆಹಲಿ ಇಂಧನ ಸಚಿವ ಸತ್ಯೇಂದ್ರ ಜೈನ್ ಅವರು ಶನಿವಾರ ವಿದ್ಯುತ್ ವಿತರಣಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು ಮತ್ತು ವಿದ್ಯುತ್ ಪೂರೈಸುವ ಸ್ಥಾವರಗಳಲ್ಲಿ ಕೇವಲ ಒಂದು ದಿನಕ್ಕೆ ಆಗುವಷ್ಟು ಕಲ್ಲಿದ್ದಲು ಇದೆ ಎಂದು ಹೇಳಿದ್ದಾರೆ.

"ದೇಶಾದ್ಯಂತ ಕಲ್ಲಿದ್ದಲಿನ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆಯಿದೆ. ದೆಹಲಿಯಲ್ಲಿ ವಿದ್ಯುತ್ ಪಡೆಯುವ ಸ್ಥಾವರಗಳಲ್ಲಿ ಕೇವಲ ಒಂದು ದಿನದ ದಾಸ್ತಾನು ಉಳಿದಿದೆ. "

ರಾಷ್ಟ್ರ ರಾಜಧಾನಿಗೆ ಕಲ್ಲಿದ್ದಲನ್ನು ಪೂರೈಸುವಂತೆ ಕೇಂದ್ರಕ್ಕೆ ದೆಹಲಿ ಸಚಿವರು ಮನವಿ ಮಾಡಿದರು.

"ರೈಲ್ವೆ ವ್ಯಾಗನ್ ಗಳನ್ನು ಬಳಸಿ ಶೀಘ್ರವೇ ಕಲ್ಲಿದ್ದಲು ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ" ಎಂದು ಹೇಳಿದರು.

ವಿದ್ಯುತ್ ಸ್ಥಾವರಗಳಿಗೆ ಪೂರೈಕೆಯಾಗುತ್ತಿರುವ ಕಲ್ಲಿದ್ದಲಿನ ಪ್ರಮಾಣ ಹೆಚ್ಚಳವಾಗದೆ ಇದ್ದರೆ ರಾಜಧಾನಿಯಲ್ಲಿ ವಿದ್ಯುತ್ ಕೊರತೆ ಎದುರಾಗಲಿದೆ ಎಂದು ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಕಲ್ಲಿದ್ದಲು ಪೂರೈಕೆ ಸುಧಾರಣೆಯಾಗದೆ ಇದ್ದಲ್ಲಿ, ಮುಂದಿನ ಎರಡು ದಿನಗಳಲ್ಲಿ ದೆಹಲಿಯಲ್ಲಿ ವಿದ್ಯುತ್ ಅಭಾವ ಉಂಟಾಗಲಿದೆ. ಕಲ್ಲಿದ್ದಲನ್ನು ದಹಿಸಿ ದೆಹಲಿ ವಿದ್ಯುತ್ ನೀಡುವ ಸ್ಥಾವರಗಳು ಒಂದು ತಿಂಗಳಿಗೆ ಸಾಲುವಷ್ಟು ಕನಿಷ್ಠ ಕಲ್ಲಿದ್ದಲು ಸಂಗ್ರಹವನ್ನು ಹೊಂದಿರಬೇಕು. ಆದರೆ ಅವುಗಳ ಸಂಗ್ರಹ ಒಂದು ದಿನಕ್ಕೆ ಕುಸಿದಿದೆ ಎಂದು ಸತ್ಯೇಂದ್ರ ಜೈನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com