ಲಖಿಂಪುರ್ ಹಿಂಸಾಚಾರ: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಬಂಧನ!

ಲಖಿಂಪುರ್ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ನಾಯಕ ಆಶಿಶ್ ಮಿಶ್ರಾರನ್ನು ಉತ್ತರ ಪ್ರದೇಶದ ಎಸ್ಐಟಿ ತಂಡ ಬಂಧಿಸಿದೆ.
ಆಶಿಶ್ ಮಿಶ್ರಾ
ಆಶಿಶ್ ಮಿಶ್ರಾ

ಲಖನೌ: ಲಖಿಂಪುರ್ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ನಾಯಕ ಆಶಿಶ್ ಮಿಶ್ರಾರನ್ನು ಉತ್ತರ ಪ್ರದೇಶದ ಎಸ್ಐಟಿ ತಂಡ ಬಂಧಿಸಿದೆ.

ಇಂದು ಬೆಳಗ್ಗೆ ಆಶಿಶ್ ಮಿಶ್ರಾ ಅಪರಾಧ ವಿಭಾಗ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿದ್ದರು. ಸುಮಾರು 10 ಗಂಟೆಗಳ ಸುದೀರ್ಘ ವಿಚಾರಣೆ ನಡೆಸಿದ್ದ ಎಸ್ಐಟಿ ತಂಡ ಇದೀಗ ಆಶಿಶ್ ಮಿಶ್ರಾರನ್ನು ಬಂಧಿಸಿದೆ.

ವಿಚಾರಣೆ ವೇಳೆ ಮಿಶ್ರಾಗೆ ಸುಮಾರು 40 ಪ್ರಶ್ನೆಗಳನ್ನು ಕೇಳಲಾಗಿತ್ತು. ಇನ್ನು ಎಸ್ಐಟಿ ಆಶಿಶ್ ಗೆ ಘಟನೆಯ ದಿನ ಮಧ್ಯಾಹ್ನ 2:36ರಿಂದ 3:30 ರವರೆಗೆ ಎಲ್ಲಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ತೃಪ್ತಿದಾಯಕ ಉತ್ತರ ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ವಿಚಾರಣೆಯ ವಿಡಿಯೋವನ್ನು ಕೂಡ ಮಾಡಲಾಗಿತ್ತು.

ಡಿಐಜಿ ಉಪೇಂದ್ರ ಅಗರವಾಲ್ ಮತ್ತು ಲಖಿಂಪುರದ ಎಸ್‌ಡಿಎಂ ಕೂಡ ಆಶಿಶ್ ಮಿಶ್ರಾರನ್ನು ಅಪರಾಧ ವಿಭಾಗದ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದರು. ಈ ಸಮಯದಲ್ಲಿ, ಆಶಿಶ್ ಮಿಶ್ರಾ ಅವರ ಪರವಾಗಿ ಅನೇಕ ವೀಡಿಯೊಗಳನ್ನು ಪ್ರಸ್ತುತಪಡಿಸಿದ್ದಾರೆ. ಅವರು 10 ಜನರ ಹೇಳಿಕೆಯ ಅಫಿಡವಿಟ್ ಅನ್ನು ಪೊಲೀಸರಿಗೆ ತೋರಿಸಿದ್ದಾರೆ. ಆಶಿಶ್ ಅವರ ವಕೀಲರು ಕೂಡ ಅಲ್ಲಿ ಇದ್ದರು.

ಐಪಿಸಿ ಸೆಕ್ಷನ್ 147, 148, 149 (ಗಲಭೆಗಳಿಗೆ ಸಂಬಂಧಿಸಿ), 279 (ಅಜಾಗರೂಕ ಚಾಲನೆ), 338 (ತನ್ನ ಜೀವಕ್ಕೆ ಅಪಾಯವನ್ನುಂಟುಮಾಡುವ ಯಾವುದೇ ವ್ಯಕ್ತಿಗೆ ನೋವುಂಟು ಮಾಡುವುದು), 304-ಎ (ನಿರ್ಲಕ್ಷ್ಯದಿಂದ ಸಾವು), ಆಶಿಶ್ ಮಿಶ್ರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 302 (ಕೊಲೆ) ಮತ್ತು 120ಬಿ (ಕ್ರಿಮಿನಲ್ ಪಿತೂರಿ). ಆಶಿಶ್ ಬಂಧನಕ್ಕೆ ಸಂಬಂಧಿಸಿದಂತೆ ಇಡೀ ವಿರೋಧ ಪಕ್ಷ ಮತ್ತು ರೈತ ಸಂಘಟನೆಗಳು ಉತ್ತರಪ್ರದೇಶ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರಿದ್ದವು. 

ಅಕ್ಟೋಬರ್ 3 ರಂದು, ಲಖಿಂಪುರ್ ಖೇರಿಯಲ್ಲಿ ಥಾರ್ ಜೀಪ್ ಗುದ್ದಿದ್ದರಿಂದ ನಾಲ್ವರು ರೈತರು ಸಾವನ್ನಪ್ಪಿದ್ದರು. ಇದರ ನಂತರದ ಹಿಂಸಾಚಾರದಲ್ಲಿ ಇನ್ನೂ ನಾಲ್ಕು ಜನರು ಸಾವನ್ನಪ್ಪಿದರು. ಉತ್ತರಪ್ರದೇಶ ಸರ್ಕಾರವು ಎಲ್ಲಾ ಮೃತರ ಕುಟುಂಬಗಳಿಗೆ 45-45 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಘೋಷಿಸಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com