ಮದುವೆ ಎಂಬ ಸಣ್ಣ ಸ್ವಾರ್ಥಕ್ಕಾಗಿ ಧಾರ್ಮಿಕ ಮತಾಂತರ ಮಾಡುತ್ತಿರುವುದು ತಪ್ಪು: ಮೋಹನ್ ಭಾಗವತ್
ಮದುವೆ ಎಂಬ ಸಣ್ಣ ಸ್ವಾರ್ಥಕ್ಕಾಗಿ ಧಾರ್ಮಿಕ ಮತಾಂತರ ಮಾಡಲಾಗುತ್ತಿದೆ. ಇದು ತಪ್ಪು,’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
Published: 11th October 2021 12:20 PM | Last Updated: 11th October 2021 12:20 PM | A+A A-

ಮೋಹನ್ ಭಾಗವತ್
ಹಲ್ದ್‌ವಾನಿ: ಮದುವೆ ಎಂಬ ಸಣ್ಣ ಸ್ವಾರ್ಥಕ್ಕಾಗಿ ಧಾರ್ಮಿಕ ಮತಾಂತರ ಮಾಡಲಾಗುತ್ತಿದೆ. ಇದು ತಪ್ಪು,’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಉತ್ತರಾಖಂಡದ ಹಲ್ದ್‌ವಾನಿ ಎಂಬಲ್ಲಿ ಭಾನುವಾರ ಮಾತನಾಡಿರುವ ಅವರು, ‘ಮತಾಂತರ ಹೇಗೆ ನಡೆಯುತ್ತದೆ? ನಮ್ಮ ಹೆಣ್ಣುಮಕ್ಕಳು ಮತ್ತು ಹುಡುಗರು ಇತರ ಧರ್ಮಗಳಿಗೆ ಹೇಗೆ ಮತಾಂತರಗೊಳ್ಳುತ್ತಿದ್ದಾರೆ? ಮದುವೆ ಎಂಬ ಸಣ್ಣ ಸ್ವಾರ್ಥಕ್ಕಾಗಿ ಮತಾಂತರ ನಡೆಯುತ್ತಿದೆ. ಇದು ತಪ್ಪು’ ಎಂದು ಅವರು ಹೇಳಿದರು.
ನಾವು ನಮ್ಮ ಮಕ್ಕಳಲ್ಲಿ ಆತ್ಮಾಭಿಮಾನ ಮತ್ತು ನಮ್ಮ ಧರ್ಮದ ಕುರಿತು ಗೌರವ ಮೂಡುವಂತೆ ಮಾಡಬೇಬೇಕು,’ ಎಂದು ಅವರು ತಿಳಿಸಿದ್ದಾರೆ. ಜನರು ಗೊಂದಲಕ್ಕೀಡಾಗದೇ ಈ ನಿಟ್ಟಿನಲ್ಲಿ ಪ್ರಶ್ನೆಗಳಿಗೆ ಉತ್ತರಿಸುವಂತೆ ಅವರು ಒತ್ತಾಯಿಸಿದರು. ಪ್ರಶ್ನೆಗಳು ಬಂದರೆ ಉತ್ತರಿಸಿ. ಗೊಂದಲಗೊಳ್ಳಬೇಡಿ. ನಾವು ನಮ್ಮ ಮಕ್ಕಳನ್ನು ಅದಕ್ಕಾಗಿ ಸಿದ್ಧಪಡಿಸಬೇಕು ಮತ್ತು ನಾವು ಕಲಿಯಬೇಕು ಎಂದು ಮೋಹನ್ ಭಾಗವತ್ ಹೇಳಿದರು.
ಸಾಂಪ್ರದಾಯಿಕ ಕುಟುಂಬ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವ ಬಗ್ಗೆ ಮಾತನಾಡಿದ ಮೋಹನ್ ಭಾಗವತ್, ಭಾರತೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಮನೆಯಲ್ಲಿ ಬೆಳೆದ ಆಹಾರವನ್ನು ಸೇವಿಸಿ ಮತ್ತು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುವಂತೆ ಜನರಿಗೆ ಸಲಹೆ ನೀಡಿದ್ದಾರೆ.