ಜಮ್ಮು-ಕಾಶ್ಮೀರದ ಅನಂತ್ ನಾಗ್, ಬಂಡಿಪೊರಾ ಜಿಲ್ಲೆಗಳಲ್ಲಿ ಎನ್ ಕೌಂಟರ್: ಇಬ್ಬರು ಉಗ್ರರ ಹತ್ಯೆ, ಪೊಲೀಸ್ ಗೆ ಗಾಯ 

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸಪ್ಪಳ ಕೇಳಿಬಂದಿದೆ. ಬಂಡಿಪೊರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕನನ್ನು ಇಮ್ತಿಯಾಜ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಲ್‌ಇಟಿ (ಟಿಆರ್‌ಎಫ್) ಗೆ ಸೇರಿದವನಾಗಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸಪ್ಪಳ ಕೇಳಿಬಂದಿದೆ. ಬಂಡಿಪೊರ ಮತ್ತು ಅನಂತ್ ನಾಗ್ ಜಿಲ್ಲೆಗಳಲ್ಲಿ ಇಂದು ನಸುಕಿನ ಜಾವ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ.

ಬಂಡಿಪೊರಾದಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕನನ್ನು ಇಮ್ತಿಯಾಜ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಲ್‌ಇಟಿ (ಟಿಆರ್‌ಎಫ್) ಗೆ ಸೇರಿದವನಾಗಿದ್ದಾನೆ. ಪೊಲೀಸರೊಬ್ಬರಿಗೆ ಗಾಯವಾಗಿದೆ. ಶೋಧಕಾರ್ಯ ಮುಂದುವರಿದಿದೆ ಎಂದು ಜಮ್ಮು-ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ಮೃತ ಭಯೋತ್ಪಾದಕ ಇತ್ತೀಚೆಗೆ ಬಂಡಿಪೊರಾದ ಶಹ್ಗುಂಡ್ ಪ್ರದೇಶದಲ್ಲಿ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ. 

ಬಂಡಿಪೋರಾ ಜಿಲ್ಲೆಯ ಹಜಿನ್ ಪ್ರದೇಶದ ಗುಂಡ್ಜಹಾಂಗೀರ್ ನಲ್ಲಿ ನಡೆದ ಇನ್ನೊಂದು ಎನ್ಕೌಂಟರ್ ನಲ್ಲಿ, ಲಷ್ಕರ್-ಎ-ತೊಯ್ಬಾ ಉಗ್ರನನ್ನು ಕೊಲ್ಲಲಾಯಿತು. ಹತ್ಯೆಗೀಡಾದ ಭಯೋತ್ಪಾದಕನನ್ನು ಇಮ್ತಿಯಾಜ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಲ್‌ಇಟಿ (ಟಿಆರ್‌ಎಫ್) ಗೆ ಸಂಬಂಧಿಸಿದೆ.

ಇತ್ತೀಚೆಗೆ ಶಹಗುಂಡ್ ಬಂಡಿಪೋರಾದಲ್ಲಿ ನಡೆದ ನಾಗರಿಕ ಹತ್ಯೆಯಲ್ಲಿ ಭಾಗಿಯಾಗಿದ್ದನು ಎಂದು ಕಾಶ್ಮೀರದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್, ವಿಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು ಅನಂತ್ ನಾಗ್ ಜಿಲ್ಲೆಯ ವೆರಿನಾಗ್ ಪ್ರದೇಶದ ಖಗುಂದ್ ನಲ್ಲಿ ಭಯೋತ್ಪಾದಕರು ಅಡಗಿರುವ ಮಾಹಿತಿ ಮೇರೆಗೆ ಪ್ರದೇಶ ಸುತ್ತುವರಿದು ಶೋಧಕಾರ್ಯ ಪ್ರಾರಂಭಿಸಿದರು.

ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್ಕೌಂಟರ್ ಆಗಿ ಬದಲಾಯಿತು, ಅವರು ಪ್ರತಿದಾಳಿ ನಡೆಸಿದರು. ಒಬ್ಬ ಉಗ್ರನನ್ನು ಹತ್ಯೆಗೈದರೆ, ಒಬ್ಬ ಪೊಲೀಸ್ ಗಾಯಗೊಂಡರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮೊನ್ನೆ ಅಕ್ಟೋಬರ್ 5 ರಂದು ಬಂಡಿಪೋರಾದ ಶಹಗುಂಡ್ ಪ್ರದೇಶದಲ್ಲಿ ಸುಮೋ ಚಾಲಕ ಮೊಹಮ್ಮದ್ ಶಫಿ ಲೋನ್ ನ ಹತ್ಯೆಯಲ್ಲಿ ಇಮ್ತಿಯಾಜ್ ಭಾಗಿಯಾಗಿದ್ದಾನೆ ಎಂದು ಅವರು ಹೇಳಿದರು. ಸುಮೋ ಚಾಲಕನ ಹತ್ಯೆಯ ಹಿಂದೆ ಸಂಚು ರೂಪಿಸಿದ್ದ ನಾಲ್ವರು ಉಗ್ರಗಾಮಿ ಸಹಚರರನ್ನು ಬಂಧಿಸುವ ಮೂಲಕ ಪೊಲೀಸರು ನಿನ್ನೆ ಟಿಆರ್ ಎಫ್ ನ ಉಗ್ರಗಾಮಿ ಘಟಕವನ್ನು ಭೇದಿಸಿದ್ದರು.

ಅಕ್ಟೋಬರ್ 5 ರಂದು ಉಗ್ರರು ಮೂವರು ನಾಗರಿಕರನ್ನು ಗುಂಡಿಕ್ಕಿ ಕೊಂದರು - ಲೋನ್, ಪ್ರಮುಖ ಕಾಶ್ಮೀರಿ ಪಂಡಿತ್ ಉದ್ಯಮಿ ಮತ್ತು ರಸಾಯನಶಾಸ್ತ್ರಜ್ಞ ಎಂ ಎಲ್ ಬಿಂದ್ರೂ ಮತ್ತು ಸ್ಥಳೀಯ ಬೀದಿ ವ್ಯಾಪಾರಿ ಬಿಹಾರದ ವೀರೇಂದ್ರ ಪಾಸ್ವಾನ್ ಕಣಿವೆಯ ಮೂರು ಸ್ಥಳಗಳಲ್ಲಿ. ಬಿಂದ್ರೂ ಮತ್ತು ಪಾಸ್ವಾನ್ ಶ್ರೀನಗರದಲ್ಲಿ ಕೊಲ್ಲಲ್ಪಟ್ಟರೆ, ಲೋನ್ ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿಗೆ ಬಲಿಯಾಗಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com