ಡ್ರಗ್ಸ್ ಕೇಸ್: ಜೈಲಿನಿಂದ ಶಾರೂಖ್ ಗೆ ವಿಡಿಯೋ ಕಾಲ್; 4,500 ರೂ. ಮನಿ ಅರ್ಡರ್ ಪಡೆದ ಆರ್ಯನ್ ಖಾನ್
ಡ್ರಗ್ಸ್ ಪ್ರಕರಣದಲ್ಲಿ ಜೈಲಿನಲ್ಲಿರುವ ಆರ್ಯನ್ ಖಾನ್ ತನ್ನ ತಂದೆ ಶಾರೂಖ್ ಖಾನ್ ಮತ್ತು ಗೌರಿಯೊಂದಿಗೆ ಮುಂಬೈನ ಆರ್ಥರ್ ರೋಡ್ ಜೈಲಿನಿಂದಲೇ ವಿಡಿಯೋ ಕಾಲ್ ಮೂಲಕ ಸಂವಾದ ನಡೆಸಿದ್ದಾನೆ ಎಂದು ಜೈಲು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Published: 15th October 2021 07:15 PM | Last Updated: 15th October 2021 07:22 PM | A+A A-

ಆರ್ಯನ್ ಖಾನ್
ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಜೈಲಿನಲ್ಲಿರುವ ಆರ್ಯನ್ ಖಾನ್ ತನ್ನ ತಂದೆ ಶಾರೂಖ್ ಖಾನ್ ಮತ್ತು ಗೌರಿಯೊಂದಿಗೆ ಮುಂಬೈನ ಆರ್ಥರ್ ರೋಡ್ ಜೈಲಿನಿಂದಲೇ ವಿಡಿಯೋ ಕಾಲ್ ಮೂಲಕ ಸಂವಾದ ನಡೆಸಿದ್ದಾನೆ ಎಂದು ಜೈಲು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಗೆ ಜಾಮೀನು ಇಲ್ಲ, ಅಕ್ಟೋಬರ್ 20ಕ್ಕೆ ಮುಂದಿನ ವಿಚಾರಣೆ
ಕ್ರೂಸ್ ಪಾರ್ಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ 23 ವರ್ಷದ ಆರ್ಯನ್ ಖಾನ್ಗೆ ಕುಟುಂಬವು 4,500 ರೂಪಾಯಿ ಮನಿ ಆರ್ಡರ್ ಕಳುಹಿಸಿದೆ. ಜೈಲಿನಲ್ಲಿ ಆರ್ಯನ್ ತನಗೆ ಇಷ್ಟವಾದ ಆಹಾರ ಹಾಗೂ ಇತರೆ ವಸ್ತು ಖರೀದಿ ಮಾಡಲು ಮನಿ ಆರ್ಡರ್ ಮಾಡಲಾಗಿದೆ. ಅಲ್ಲದೇ ವಾರದಲ್ಲಿ ಎರಡು ಸಲ ವಿಡಿಯೋ ಕಾಲ್ ಮಾಡಿ ಪೋಷಕರೊಂದಿಗೆ 10 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗಿದೆ.
ಆರ್ಯನ್ ಖಾನ್ಗೆ ಅವರ ಕುಟುಂಬದವರು ಅಕ್ಟೋಬರ್ 11 ರಂದು 4,500 ರೂಪಾಯಿಗಳ ಮನಿ ಆರ್ಡರ್ನನ್ನು ಕಳುಹಿಸಿದ್ದಾರೆ. ಇದನ್ನು ಜೈಲು ಕ್ಯಾಂಟೀನ್‌ನಲ್ಲಿ ಅವರು ಬಳಸಹುದಾಗಿದೆ. ನಿಯಮಗಳ ಪ್ರಕಾರ ಜೈಲಿನೊಳಗೆ ಕೈದಿಗಳು ತಮ್ಮ ವೆಚ್ಚಕ್ಕಾಗಿ ಗರಿಷ್ಠ 4500 ರೂಪಾಯಿಗಳ ಮನಿ ಆರ್ಡರ್ ಪಡೆಯಬಹುದು ಎಂದು ಜೈಲ್ ಸೂಪರಿಂಟೆಂಡೆಂಟ್ ನಿತಿನ್ ವೇಚಲ್ ಹೇಳಿದ್ದಾರೆ.