ದೇಶಾದ್ಯಂತ 97 ಕೋಟಿ 23 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಿಕೆ: ಕೇಂದ್ರ ಆರೋಗ್ಯ ಸಚಿವಾಲಯ

ದೇಶಾದ್ಯಂತ ನಡೆಯುತ್ತಿರುವ ರಾಷ್ಟ್ರೀಯ ಲಸಿಕಾ ಅಭಿಯಾನದಡಿ ಇದುವರೆಗೆ, 97 ಕೋಟಿ 23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ನಿನ್ನೆ ಒಂದೇ ದಿನ 8 ಲಕ್ಷ 36 ಸಾವಿರಕ್ಕೂ ಅಧಿಕ ಮಂದಿ ಲಸಿಕೆ ಡೋಸ್‌ಗಳನ್ನು ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶಾದ್ಯಂತ ನಡೆಯುತ್ತಿರುವ ರಾಷ್ಟ್ರೀಯ ಲಸಿಕಾ ಅಭಿಯಾನದಡಿ ಇದುವರೆಗೆ, 97 ಕೋಟಿ 23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ನಿನ್ನೆ ಒಂದೇ ದಿನ 8 ಲಕ್ಷ 36 ಸಾವಿರಕ್ಕೂ ಅಧಿಕ ಮಂದಿ ಲಸಿಕೆ ಡೋಸ್‌ಗಳನ್ನು ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ, 17 ಸಾವಿರದ 861 ಸೋಂಕಿತರು ಗುಣಮುಖರಾಗಿದ್ದು, ಪ್ರಸ್ತುತ ದೇಶದ ಕೋವಿಡ್ ಚೇತರಿಕೆ ಪ್ರಮಾಣ ಶೇಕಡ 98. 08ರಷ್ಟಿದ್ದು, ಇದು ಕಳೆದ ಮಾರ್ಚ್‌ನಿಂದ ದಾಖಲಾಗಿರುವ ಅತ್ಯಧಿಕ ಚೇತರಿಕೆ ಪ್ರಮಾಣವಾಗಿದೆ. ಈವರೆಗೆ, ಸುಮಾರು ಮೂರು ಕೋಟಿ 33 ಲಕ್ಷ 99 ಸಾವಿರದ 961 ಮಂದಿ ಚೇತರಿಸಿಕೊಂಡಿದ್ದಾರೆ.

ನಿನ್ನೆ 15 ಸಾವಿರದ 981ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಕಳೆದ ಎಂಟು ದಿನಗಳಿಂದ 20 ಸಾವಿರಕ್ಕಿಂತ ಕಡಿಮೆ ಇದೆ. ಪ್ರಸ್ತುತ ದೇಶದಲ್ಲಿ ಅಂದಾಜು ಎರಡು ಲಕ್ಷ 1 ಸಾವಿರದ 632 ಪ್ರಕರಣಗಳು ಸಕ್ರಿಯವಾಗಿವೆ. ಇದು ವರದಿಯಾದ ಒಟ್ಟು ಪ್ರಕರಣಗಳ ಶೇಕಡ ಒಂದಕ್ಕಿಂತ ಕಡಿಮೆ ಅಂದರೆ ಶೇಕಡ 0.59 ರಷ್ಟಿದ್ದು, ಇದು ಕಳೆದ ಮಾರ್ಚ್‌ನಿಂದ ದಾಖಲಾದ ಅತ್ಯಂತ ಕಡಿಮೆ ಪ್ರಮಾಣವಾಗಿದೆ. 

ವಾರದ ಸಕ್ರಿಯತೆ ದರ ಕಳೆದ ೧೧೩ ದಿನಗಳಿಂದ ಶೇಕಡ ಮೂರಕ್ಕಿಂತ ಕಡಿಮೆ, ಅಂದರೆ ಶೇಕಡ 1.44 ರಷ್ಟಿದೆ. ದೈನಂದಿನ ಸಕ್ರಿಯತೆ ದರ ಕಳೆದ 47 ದಿನಗಳಿಂದ ಶೇಕಡ ಮೂರಕ್ಕಿಂತ ಕಡಿಮೆ ಅಂದರೆ, ಶೇಕಡ 1.73 ರಷ್ಟಿದೆ.

ದೇಶಾದ್ಯಂತ ಇದುವರೆಗೆ ಅಂದಾಜು 58 ಕೋಟಿ 98  ಲಕ್ಷ ಕೋವಿಡ್ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಕಳೆದ 24  ಗಂಟೆಗಳಲ್ಲಿ 9 ಲಕ್ಷ 23 ಸಾವಿರಕ್ಕೂ ಹೆಚ್ಚು ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com