ಚಲಿಸುತ್ತಿದ್ದ ರೈಲು ಇಳಿಯಲು ಹೋಗಿ ಜಾರಿ ಬಿದ್ದ ತುಂಬು ಗರ್ಭಿಣಿ: ಆರ್'ಪಿಎಫ್ ಯೋಧನಿಂದ ರಕ್ಷಣೆ

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಜಾರಿ ಕೆಳಗೆ ಬಿದ್ದ ತುಂಬು ಗರ್ಭಣಿ ಮಹಿಳೆಯೊಬ್ಬರನ್ನು ಕೂಡಲೇ ಆರ್'ಪಿಎಫ್ ಯೋಧರೊಬ್ಬರು ರಕ್ಷಣೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗರ್ಭಿಣಿ ಮಹಿಳೆಯನ್ನು ರಕ್ಷಣೆ ಮಾಡುತ್ತಿರುವ ಆರ್'ಪಿಎಫ್ ಯೋಧ
ಗರ್ಭಿಣಿ ಮಹಿಳೆಯನ್ನು ರಕ್ಷಣೆ ಮಾಡುತ್ತಿರುವ ಆರ್'ಪಿಎಫ್ ಯೋಧ

ಥಾಣೆ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಜಾರಿ ಕೆಳಗೆ ಬಿದ್ದ ತುಂಬು ಗರ್ಭಣಿ ಮಹಿಳೆಯೊಬ್ಬರನ್ನು ಕೂಡಲೇ ಆರ್'ಪಿಎಫ್ ಯೋಧರೊಬ್ಬರು ರಕ್ಷಣೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಲ್ಯಾಣ್​ ರೈಲ್ವೆ ಸ್ಟೇಷನ್​ನಲ್ಲಿ ಸೋಮವಾರ ಈ ಘಟನೆ ನಡೆದಿದೆ. ಘಟನೆಯ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. 

ಕಲ್ಯಾಣ್​ ರೈಲ್ವೆ ಸ್ಟೇಷನ್ ಪ್ಲಾಟ್ ಫಾರ್ಮ್​ ನಂಬರ್ 4ರಲ್ಲಿ ಘಟನೆ ನಡೆದಿದೆ. ಪ್ಲಾಟ್ ಫಾರ್ಮ್ ಮತ್ತು ರೈಲಿನ ನಡುವಿನ ಅಂತರದಲ್ಲಿ ಗರ್ಭಿಣಿ ಮಹಿಳೆ ಸಿಕ್ಕಿಹಾಕಿಕೊಳ್ಳುತ್ತಿದ್ದರು. ಈ ವೇಳೆ ತಡಮಾಡದೇ ಆರ್​ಪಿಎಫ್​ ಯೋಧ ಮಹಿಳೆಯನ್ನು ರಕ್ಷಿಸಿದ್ದಾರೆ.

ಮಹಿಳೆ ತನ್ನ ಪತಿ ಮತ್ತು ಮಗನ ಜೊತೆಯಲ್ಲಿ ತಾವು ತೆರಳಬೇಕಿದ್ದ ರೈಲಿಗೆ ಹತ್ತುವ ಬದಲು ಬೇರೊಂದು ರೈಲು ಹತ್ತಿದ್ದರು. ಬಳಿಕ ಈ ಬಗ್ಗೆ ಅರಿತ ಮಹಿಳೆ ಇಳಿಯಲು ಮುಂದಾಗಿದ್ದರು. ಈ ವೇಳೆ ರೈಲು ಚಲಿಸಲು ಆರಂಭವಾಗಿತ್ತು. ಆದರೂ, ಮಹಿಳೆ ರೈಲು ಇಳಿಯಲು ಯತ್ನಿಸಿದ್ದರು. ಇದನ್ನು ಗಮನಿಸಿದ ಆರ್‌ಪಿಎಫ್ ಯೋಧ ಕೂಡಲೇ ಧಾವಿಸಿ ಮಹಿಳೆಯನ್ನು ರಕ್ಷಣೆ ಮಾಡಿದರು. 

ಘಟನೆ ಬಳಿಕ ಸ್ಥಳದಲ್ಲಿದ್ದ ಜನರು ಯೋಧನಿಗೆ ಭಾರೀ ಶ್ಲಾಘನೆಗಳನ್ನು ವ್ಯಕ್ತಪಡಿಸಿದರು. ಘಟನೆಯ ಸಿಸಿಟಿವಿ ದೃಶ್ಯವನ್ನು ಮುಂಬೈನ ಸೆಂಟ್ರಲ್ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. 

ಕಲ್ಯಾಣ್ ರೈಲ್ವೇ ಸ್ಟೇಷನ್​ನ ಆರ್​ಪಿಎಫ್​ ಅಧಿಕಾರಿ ಎಸ್.ಆರ್ ಖಂದೇಕರ್ ಮಹಿಳೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಚಲಿಸುತ್ತಿರುವ ರೈಲನ್ನು ಹತ್ತುವುದು ಅಥವಾ ಇಳಿಯುವ ಸಾಹಸ ಮಾಡಬೇಡಿ ಎಂದು ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com