ಹೈದರಾಬಾದ್ ಗಾಂಧಿ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್: ತಪ್ಪಿದ ಭಾರೀ ಅನಾಹುತ

ಆಕಸ್ಮಿಕ ಬೆಂಕಿಯಿಂದ ಹೈದರಾಬಾದ್ ನ ಗಾಂಧಿ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಆಸ್ಪತ್ರೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಆಕಸ್ಮಿಕ ಬೆಂಕಿಯಿಂದ ಹೈದರಾಬಾದ್ ನ ಗಾಂಧಿ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಆಸ್ಪತ್ರೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

ಗಾಂಧಿ ಆಸ್ಪತ್ರೆಯ ನೆಲ ಮಹಡಿಯಲ್ಲಿರುವ ವಿದ್ಯುತ್ ಘಟಕದ ಪೆಟ್ಟಿಗೆಗೆ ಬೆಂಕಿ ತಗುಲಿ ಮೂರು ಮಹಡಿಗಳಲ್ಲಿ ವಿದ್ಯುತ್ ಕೇಬಲ್‌ಗಳಿಗೆ ಹರಡಿತ್ತು. 

ಬೆಳಗ್ಗೆ 7.20ರ ಸುಮಾರಿಗೆ ದುರಂತ ಸಂಭವಿಸಿದೆ. ರೋಗಿಗಳು ದಾಖಲಾಗಿದ್ದ ನಾರ್ತ್ ಬ್ಲಾಕ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ.  ಕೂಡಲೇ ಕಾರ್ಯಪ್ರವೃತ್ತರಾದ ಆಸ್ಪತ್ರೆ ಆಡಳಿತ ಮಂಡಳಿ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದೆ, ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದೆ.

ಕ್ಯಾಂಪಸ್ ಒಳಗೆ ಫೈರ್ ಔಟ್ ಪೋಸ್ಟ್ ಇರುವುದರಿಂದ, ಹರಡುವುದನ್ನು ನಿಯಂತ್ರಿಸಲು ನಮ್ಮ ತರಬೇತಿ ಪಡೆದ ಸಿಬ್ಬಂದಿಯಿಂದ ಸಾಧ್ಯವಾಯಿತು. ಕೂಡಲೇ ಅಗ್ನಿಶಾಮಕ ಕಚೇರಿಗೆ ಕರೆ ಮಾಡಲಾಯಿತು.

ಮುಂದಿನ ಐದು ನಿಮಿಷಗಳಲ್ಲಿ ಅಗ್ನಿಶಾಮಕ ವಾಹನವು ಸ್ಥಳಕ್ಕೆ ತಲುಪಿತು ಮತ್ತು 15 ರಿಂದ 20 ನಿಮಿಷಗಳಲ್ಲಿ ಬೆಂಕಿಯನ್ನು
ನಿಯಂತ್ರಿಸಲಾಯಿತು" ಎಂದು ಗಾಂಧಿ ಆಸ್ಪತ್ರೆ ಅಧೀಕ್ಷಕ ಡಾ ಎಂ ರಾಜಾ ರಾವ್ ಹೇಳಿದ್ದಾರೆ. ವಿದ್ಯುತ್ ಸಂಪರ್ಕ ಹಾಳಾಗಿರುವುದರಿಂದ, ಉತ್ತರ ಬ್ಲಾಕ್‌ನಲ್ಲಿರುವ ರೋಗಿಗಳನ್ನು ದಕ್ಷಿಣ ಬ್ಲಾಕ್‌ಗೆ ವರ್ಗಾಯಿಸಲಾಗುತ್ತಿದೆ. ಚಿಕಿತ್ಸೆಗೆ ಯಾವುದೇ ಅಡ್ಡಿ ಅಥವಾ ಅನಾನುಕೂಲತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com