ಕ್ರೂಸ್ ಶಿಪ್ ಡ್ರಗ್ ಕೇಸು: ಶಾರೂಕ್ ಖಾನ್ ನಿವಾಸ 'ಮನ್ನತ್'ಮೇಲೆ ಎನ್ ಸಿಬಿ ಭೇಟಿ, ನಟಿ ಅನನ್ಯಾ ಪಾಂಡೆಗೆ ಸಮನ್ಸ್
ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಗೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ(ಎನ್ ಸಿಬಿ) ಮತ್ತಷ್ಟು ಶಾಕ್ ನೀಡುತ್ತಿದೆ. ಗುರುವಾರ ಬೆಳಗ್ಗೆ ಎನ್ ಸಿಬಿ ಅಧಿಕಾರಿಗಳ ತಂಡ ಅವರ ಮುಂಬೈಯಲ್ಲಿರುವ ಅವರ ನಿವಾಸ ಮನ್ನತ್ ಮೇಲೆ ದಾಳಿ ನಡೆಸಿದ್ದಾರೆ.
Published: 21st October 2021 01:08 PM | Last Updated: 21st October 2021 05:45 PM | A+A A-

ಎನ್ ಸಿಬಿ ಅಧಿಕಾರಿಗಳ ತಂಡ
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಗೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ(ಎನ್ ಸಿಬಿ) ಮತ್ತಷ್ಟು ಶಾಕ್ ನೀಡುತ್ತಿದೆ. ಗುರುವಾರ ಬೆಳಗ್ಗೆ ಎನ್ ಸಿಬಿ ಅಧಿಕಾರಿಗಳ ತಂಡ ಅವರ ಮುಂಬೈಯಲ್ಲಿರುವ ಅವರ ನಿವಾಸ ಮನ್ನತ್ ಮೇಲೆ ದಾಳಿ ನಡೆಸಿದ್ದಾರೆ.
ಕಳೆದ ಅಕ್ಟೋಬರ್ 3ರಂದು ಮುಂಬೈಯ ಕಡಲ ತೀರದಲ್ಲಿ ಕ್ರೂಸ್ ಶಿಪ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ವೇಳೆ ಸಿಕ್ಕಿಬಿದ್ದು ಈಗ ಅರ್ಥೂರ್ ರೋಡ್ ಜೈಲಿನಲ್ಲಿರುವ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಇದೇ 26ರಂದು ಮುಂಬೈ ಹೈಕೋರ್ಟ್ ನಲ್ಲಿ ನಡೆಯಲಿರುವುದರ ಮಧ್ಯೆಯೇ ಈ ಬೆಳವಣಿಗೆ ನಡೆದಿದೆ.
ಎನ್ ಸಿಬಿ ಅಧಿಕಾರಿಗಳು ಯಾವ ಮಾಹಿತಿಯನ್ನು ಕಲೆ ಹಾಕಲು ಶಾರೂಕ್ ಖಾನ್ ನಿವಾಸಕ್ಕೆ ಆಗಮಿಸಿದ್ದಾರೆ, ನಟನ ಮನೆಯಲ್ಲಿ ಏನು ಶೋಧ, ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಪೂರ್ಣ ಮಾಹಿತಿ ಸಿಕ್ಕಿಲ್ಲ, ಆದರೂ ಅವರ ಪುತ್ರ ಆರ್ಯನ್ ಖಾನ್ ಗೆ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳ ಜೊತೆ ನಿರಂತರ ಸಂಪರ್ಕವಿತ್ತು, ಡ್ರಗ್ಸ್ ತರಿಸುವುದು, ಸೇವಿಸುವುದು ನಿರಂತರವಾಗಿ ನಡೆಯತ್ತಿತ್ತು ಎಂಬ ಆರೋಪವಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ, ಸಾಕ್ಷ್ಯ ಕಲೆಹಾಕಲು ಇಂದಿನ ದಾಳಿ ನಡೆದಿರಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಕ್ರೂಸ್ ಡ್ರಗ್ ಕೇಸು: ಮುಂಬೈ ಹೈಕೋರ್ಟ್ ನಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಅ.26ಕ್ಕೆ
ಇನ್ನೊಂದೆಡೆ ಎನ್ ಸಿಬಿಯ ಡ್ರಗ್ ವಿರೋಧಿ ತಂಡ ನಟಿ ಅನನ್ಯಾ ಪಾಂಡೆ ನಿವಾಸಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿ ಮಧ್ಯಾಹ್ನ ವಿಚಾರಣೆಗೆ ಬರುವಂತೆ ನಟಿಗೆ ಸಮನ್ಸ್ ನೀಡಿದ್ದಾರೆ. ನಟಿ ಅನನ್ಯಾ ಪಾಂಡೆ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸ್ನೇಹಿತೆಯಾಗಿದ್ದು ಡ್ರಗ್ಸ್ ಗೆ ಸಂಬಂಧಿಸಿದ ವಾಟ್ಸಾಪ್ ಚಾಟ್ ಆರ್ಯನ್ ಖಾನ್ ಮೊಬೈಲ್ ನಲ್ಲಿ ಸಿಕ್ಕಿದೆ, ಇದಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ವಿಚಾರಣೆಗೆ ಕರೆದಿದೆ ಎಂದು ಹೇಳಲಾಗುತ್ತಿದೆ. ಬಾಲಿವುಡ್ ನಟ ಚಂಕಿ ಪಾಂಡೆಯವರ ಪುತ್ರಿ ನಟಿ ಅನನ್ಯಾ ಪಾಂಡೆ.
ಇದನ್ನೂ ಓದಿ: ಕ್ರೂಸ್ ಡ್ರಗ್ಸ್ ಪ್ರಕರಣ: ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಆರ್ಯನ್ ಖಾನ್
ಇಂದು ಬೆಳಗ್ಗೆ ಮುಂಬೈಯ ಅರ್ಥೂರ್ ರೋಡ್ ಜೈಲಿನಲ್ಲಿರುವ ಪುತ್ರ ಆರ್ಯನ್ ಖಾನ್ ನನ್ನು ಭೇಟಿ ಮಾಡಲು ನಟ ಶಾರೂಕ್ ಖಾನ್ ತೆರಳಿದ್ದರು.ಇದಾದ ಬೆನ್ನಲ್ಲೇ ಈ ದಾಳಿ ನಡೆದಿದೆ.
Mumbai | A team of Narcotics Control Bureau (NCB) is currently present at actor Shah Rukh Khan's residence 'Mannat'
— ANI (@ANI) October 21, 2021
Earlier today, Shah Rukh Khan met son Aryan at Arthur Road Jail
Bombay High Court to hear Aryan Khan's bail application on 26th October pic.twitter.com/SyzoWVi9UL