ಕ್ರೂಸ್ ಡ್ರಗ್ ಕೇಸು: ಮುಂಬೈ ಹೈಕೋರ್ಟ್ ನಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಅ.26ಕ್ಕೆ

ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಅಕ್ಟೋಬರ್ 26ರಂದು ನಡೆಸಲಿದೆ. ಮುಂಬೈ ಕಡಲಿನಲ್ಲಿ ಕ್ರೂಸ್ ಶಿಪ್ ನಲ್ಲಿ ರೇವ್ ಪಾರ್ಟಿ ವೇಳೆ ಡ್ರಗ್ಸ್ ಸಿಕ್ಕಿದ ಆರೋಪದ ಮೇಲೆ ಆರ್ಯನ್ ಖಾನ್ ಹಾಗೂ ಇತರರನ್ನು ಕಳೆದ ಅಕ್ಟೋಬರ್ 2ರಂದು ರಾತ್ರಿ ಬಂಧಿಸಲಾಗಿತ್ತು.
ಆರ್ಯನ್ ಖಾನ್
ಆರ್ಯನ್ ಖಾನ್

ಮುಂಬೈ: ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಅಕ್ಟೋಬರ್ 26ರಂದು ನಡೆಸಲಿದೆ. ಮುಂಬೈ ಕಡಲಿನಲ್ಲಿ ಕ್ರೂಸ್ ಶಿಪ್ ನಲ್ಲಿ ರೇವ್ ಪಾರ್ಟಿ ವೇಳೆ ಡ್ರಗ್ಸ್ ಸಿಕ್ಕಿದ ಆರೋಪದ ಮೇಲೆ ಆರ್ಯನ್ ಖಾನ್ ಹಾಗೂ ಇತರರನ್ನು ಕಳೆದ ಅಕ್ಟೋಬರ್ 2ರಂದು ರಾತ್ರಿ ಬಂಧಿಸಲಾಗಿತ್ತು.

ಮುಂಬೈ ಹೈಕೋರ್ಟ್ ನ ನ್ಯಾಯಾಧೀಶ ನ್ಯಾಯಮೂರ್ತಿ ಎನ್ ಡಬ್ಲ್ಯು ಸಂಬ್ರೆ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಜಾಮೀನು ಅರ್ಜಿಯನ್ನು ಮಂಡಿಸಿದ ಆರ್ಯನ್ ಪರ ವಕೀಲ ಸತೀಶ್ ಮನೆಶಿಂದೆ ತುರ್ತು ವಿಚಾರಣೆ ನಡೆಸುವಂತೆ ಕೋರಿದರು. ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊದ ಪರವಾಗಿ ವಾದ ಮಂಡಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಮುಂದಿನ ವಾರದವರೆಗೆ ಕಾಲಾವಕಾಶ ಕೋರಿದರು. ನ್ಯಾಯಮೂರ್ತಿ ಸಂಬ್ರೆ ವಿಚಾರಣೆಯನ್ನು ಅಕ್ಟೋಬರ್ 26ಕ್ಕೆ ಮುಂದೂಡಿದರು.

ಅದೇ ದಿನ ಪ್ರಕರಣದ ಮತ್ತೊಬ್ಬ ಆರೋಪಿ ಮುನ್ಮುನ್ ದಮೆಚ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸಹ ಹೈಕೋರ್ಟ್ ನಡೆಸಲಿದೆ. 

ನಿನ್ನೆ ವಿಶೇಷ ಎನ್ ಡಿಪಿಎಸ್ ಕೋರ್ಟ್ ಆರ್ಯನ್ ಖಾನ್ ಗೆ ಜಾಮೀನು ನಿರಾಕರಿಸಿದ್ದರಿಂದ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com