ಅತ್ಯಾಚಾರ ಸಂತ್ರಸ್ತೆಯ ಚಾರಿತ್ರ್ಯ ಸರಿಯಿಲ್ಲ ಎಂದು ಆರೋಪಿಯನ್ನು ಬಿಡಲಾಗದು: ಕೇರಳ ಹೈಕೋರ್ಟ್

ಅತ್ಯಾಚಾರ ಸಂತ್ರಸ್ತೆಯ ಚಾರಿತ್ರ್ಯ ಸರಿಯಿಲ್ಲ ಎಂದು ಆರೋಪಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರ: ಅತ್ಯಾಚಾರ ಸಂತ್ರಸ್ತೆಯ ಚಾರಿತ್ರ್ಯ ಸರಿಯಿಲ್ಲ ಎಂದು ಆರೋಪಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 

ತನ್ನ ಮಗಳು ಮತ್ತೊಬ್ಬನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂದಾಕ್ಷಣ ತಂದೆಯೇ ಮಗಳ ಮೇಲೆ ಅತ್ಯಾಚಾರ ಮಾಡುವುದು ನಿಜಕ್ಕೂ ಘೋರ. ತಂದೆ ಮಗಳಿಗೆ ರಕ್ಷಕ ಮತ್ತು ಆಶ್ರಯಧಾತ ಎಂದೇ ಪರಿಗಣಿಸಿರುವುದರಿಂದ ಆತನ ಅಪರಾಧವನ್ನು ಮನ್ನಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಆರ್. ನಾರಾಯಣ ಪಿಶರಡಿ ತೀರ್ಪು ನೀಡಿದ್ದಾರೆ. 

ಮಗಳನ್ನೇ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿರುವ ತಂದೆಯನ್ನು ಮುಗ್ಧ ಎಂದು ಹೇಳಲು ಸಾಧ್ಯವಿಲ್ಲ. 2013ರ ಮೇನಲ್ಲಿ ಜನಿಸಿದ ಮಗುವಿನ ಡಿಎನ್ಎ ವಿಶ್ಲೇಷಣೆಯೂ ಸಂತ್ರಸ್ತೆಯ ತಂದೆಯೇ ಮಗುವಿನ ಜೈವಿಕ ತಂದೆ ಎಂಬುದು ಸಾಬೀತಾಗಿದೆ. ಹೀಗಿರುವಾಗ ಸಂತ್ರಸ್ತೆಗೆ ಲೈಂಗಿಕ ಆಸಕ್ತಿ ಅಧಿಕವಾಗಿದೆ ಎಂದು ರೇಪ್ ಮಾಡಿದ ಆರೋಪಿಯನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. 

ಪೋಕ್ಸೋ ಕಾಯ್ದೆಯಡಿ ಆರೋಪಿಗೆ 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆತನ ಶಿಕ್ಷೆಯನ್ನು 12 ವರ್ಷಕ್ಕೆ ಇಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com