ಜಮ್ಮುವಿನಲ್ಲಿ ನೂತನ ಐಐಟಿ ಕ್ಯಾಂಪಸ್ ಲೋಕಾರ್ಪಣೆಗೊಳಿಸಿದ ಅಮಿತ್ ಶಾ

ಬಿಗಿ ಭದ್ರತೆ ನಡುವೆ ಭಾನುವಾರ ಜಮ್ಮುವಿಗೆ ಆಗಮಿಸಿದ  ಕೇಂದ್ರ ಗೃಹ ಸಚಿವ ಅಮಿತ್ ಶಾ, ನೂತನ ಭಾರತೀಯ ತಾಂತ್ರಿಕ ಸಂಸ್ಥೆ ಕ್ಯಾಂಪಸ್ ನ್ನು ಉದ್ಘಾಟಿಸಿದ್ದಾರೆ.  
ಐಐಟಿ ಕ್ಯಾಂಪಸ್ ಉದ್ಘಾಟಿಸಿದ ಅಮಿತ್ ಶಾ
ಐಐಟಿ ಕ್ಯಾಂಪಸ್ ಉದ್ಘಾಟಿಸಿದ ಅಮಿತ್ ಶಾ

ಜಮ್ಮು: ಬಿಗಿ ಭದ್ರತೆ ನಡುವೆ ಭಾನುವಾರ ಜಮ್ಮುವಿಗೆ ಆಗಮಿಸಿದ  ಕೇಂದ್ರ ಗೃಹ ಸಚಿವ ಅಮಿತ್ ಶಾ, ನೂತನ ಭಾರತೀಯ ತಾಂತ್ರಿಕ ಸಂಸ್ಥೆ ಕ್ಯಾಂಪಸ್ ನ್ನು ಉದ್ಘಾಟಿಸಿದರು.  ಅಮಿತ್ ಶಾ ಅವರೊಂದಿಗೆ ಕೇಂದ್ರ ಸಚಿವರಾದ ಜೀತೇಂದ್ರ ಸಿಂಗ್, ಧರ್ಮೇಂದ್ರ ಪ್ರಧಾನ್ ಹಾಗೂ ಜಮ್ಮು-ಕಾಶ್ಮೀರದ ಉಪ ರಾಜ್ಯಪಾಲ ಮನೋಜ್ ಸಿನ್ಹಾ ಮತ್ತಿತರರು ಉಪಸ್ಥಿತರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ನಂತರ ಇದೇ ಮೊದಲ ಬಾರಿಗೆ ಅಮಿತ್ ಶಾ ಮೂರು ದಿನಗಳ ಕಾಲ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. 

ಸುಮಾರು 210 ಕೋಟಿ ರೂ. ವೆಚ್ಚದಲ್ಲಿ ನೂತನ ಜಮ್ಮು ಐಐಟಿ ಕ್ಯಾಂಪಸ್ ನ್ನು ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಜೊತೆಗೆ ಹಾಸ್ಟೆಲ್, ಜಿಮ್ನಾಸಿಮ್, ಒಳಾಂಗಣ ಕ್ರೀಡೆಗಳು ಮತ್ತಿತರ ಸೌಲಭ್ಯಗಳಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಮ್ಮುವಿನ ನೂತನ ಐಐಟಿ ಕ್ಯಾಂಪಸ್ ಉದ್ಘಾಟನೆ ನಂತರ ಅಮಿತ್ ಶಾ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲು ಭಗವತಿ ನಗರಕ್ಕೆ ತೆರಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com