ಮುಂಬೈ ಕ್ರೂಸ್ ಡ್ರಗ್ ಕೇಸು: ಉತ್ತರ ಪ್ರದೇಶ ಪೊಲೀಸರಿಗೆ ಶರಣಾಗುವುದಾಗಿ ಕೆ.ಪಿ.ಗೋಸಾವಿ ಹೇಳಿಕೆ, ಲಂಚ ಆರೋಪಕ್ಕೆ ವಿಜಿಲೆನ್ಸ್ ತನಿಖೆ 

ಮುಂಬೈ ಕ್ರೂಸ್ ಡ್ರಗ್ ಕೇಸಿನಲ್ಲಿ ಜೈಲಿನಿಂದ ಬಿಡುಗಡೆ ಮಾಡಿ ಪ್ರಕರಣದಿಂದ ಆರೋಪ ಮುಕ್ತ ಮಾಡಲು ಎನ್ ಸಿಬಿ ಅಧಿಕಾರಿಗಳು 25 ಕೋಟಿ ರೂಪಾಯಿ ಲಂಚ ಕೇಳಿದ್ದರು ಎಂದು ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಆರೋಪ ಮಾಡಿದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ತಲೆಮರೆಸಿಕೊಂಡಿರುವ ಸಾಕ್ಷಿ ಕೆ ಪಿ ಗೋಸಾವಿ ಆರ್ಯನ್ ಖಾನ್ ನ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳುತ್ತಿರುವುದು
ತಲೆಮರೆಸಿಕೊಂಡಿರುವ ಸಾಕ್ಷಿ ಕೆ ಪಿ ಗೋಸಾವಿ ಆರ್ಯನ್ ಖಾನ್ ನ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳುತ್ತಿರುವುದು

ಮುಂಬೈ: ಮುಂಬೈ ಕ್ರೂಸ್ ಡ್ರಗ್ ಕೇಸಿನಲ್ಲಿ ಜೈಲಿನಿಂದ ಬಿಡುಗಡೆ ಮಾಡಿ ಪ್ರಕರಣದಿಂದ ಆರೋಪ ಮುಕ್ತ ಮಾಡಲು ಎನ್ ಸಿಬಿ ಅಧಿಕಾರಿಗಳು 25 ಕೋಟಿ ರೂಪಾಯಿ ಲಂಚ ಕೇಳಿದ್ದರು ಎಂದು ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಆರೋಪ ಮಾಡಿದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಕೇಸಿನ ನಂಬರ್ 1 ಸಾಕ್ಷಿ ಪ್ರಭಾಕರ್ ಸೈಲ್ ಆಗಿದ್ದು, ಅವರು ತಮ್ಮ ಅಫಿಡವಿಟ್ಟಿನಲ್ಲಿ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮಧ್ಯವರ್ತಿ ಸಾಮ್ ಡಿ ಸೋಜ ಮತ್ತು ತಲೆಮರೆಸಿಕೊಂಡಿರುವ ಸಾಕ್ಷಿ ಕೆ ಪಿ ಗೋಸಾವಿ ಮೂಲಕ ಶಾರೂಕ್ ಖಾನ್ ಅವರಿಂದ ಪುತ್ರ ಆರ್ಯನ್ ಖಾನ್ ಬಿಡುಗಡೆಗೆ 25 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿದ್ದಾರೆ.

ಗೋಸಾವಿಯವರ ಖಾಸಗಿ ಬಾಡಿಗಾರ್ಡ್ ಪ್ರಭಾಕರ್ ಆಗಿದ್ದು, ಸಮೀರ್ ವಾಂಖೆಡೆಯವರು 10 ಖಾಲಿ ಹಾಳೆಗಳಲ್ಲಿ ಸಹಿ ಹಾಕಲು ಹೇಳಿದ್ದರು ಎಂದು ಆರೋಪಿಸಿದ್ದಾರೆ. ಎನ್ ಸಿಬಿಯ ಜಾಗೃತ ಘಟಕದ ಮುಖ್ಯಸ್ಥ ಜ್ಞಾನೇಶ್ವರ ಸಿಂಗ್ ಲಂಚ ಆರೋಪ ಪ್ರಕರಣದ ತನಿಖೆ ನಡೆಸಲಿದ್ದಾರೆ. ತನಿಖಾ ತಂಡದಲ್ಲಿ ಇಬ್ಬರು ಇನ್ಸ್ ಪೆಕ್ಟರ್ ಮಟ್ಟದ ಅಧಿಕಾರಿಗಳನ್ನು ಹೊಂದಿದ್ದು, ಅವರು ಸಮೀರ್ ವಾಂಖೆಡೆ ಮತ್ತು ಇತರರ ಹೇಳಿಕೆಗಳನ್ನು ಪಡೆಯಲಿದ್ದಾರೆ. ಪ್ರಭಾಕರ್ ಸೈಲ್ ಅವರ ಸಾಕ್ಷಿಗಳನ್ನು ತಂಡ ವಿಶ್ಲೇಷಿಸಲಿದ್ದು ನಂತರ ವರದಿಯನ್ನು ಎನ್ ಸಿಬಿಯ ಡಿಜಿಯವರಿಗೆ ನೀಡಲಿದೆ.

ಸಮೀರ್ ವಾಂಖೆಡೆಯವರ ಅಮಾನತಿನ ಬಗ್ಗೆ ಪ್ರಕರಣದ ವಸ್ತುನಿಷ್ಠತೆ ಬಗ್ಗೆ ತನಿಖೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಪ್ರಭಾಕರ್ ಸೈಲ್ ಅವರು ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಗೊಸವಿ ಮತ್ತು ಡಿಸೋಜ ಶಾರೂಕ್ ಖಾನ್ ಅವರಿಂದ ವಾಂಖೆಡೆ ಪರವಾಗಿ 25 ಕೋಟಿ ರೂಪಾಯಿ ಲಂಚ ಕೇಳಿದ್ದಾರೆ. 18 ಕೋಟಿ ರೂಪಾಯಿ ನೀಡಲು ನಟ ಮುಂದಿದ್ದರೆ ಅದರಲ್ಲಿ 8 ಕೋಟಿ ರೂಪಾಯಿಯನ್ನು ವಾಂಖೆಡೆಗೆ ಹಾಗೂ ಉಳಿದ ಹಣವನ್ನು ಅವರು ಹಂಚಿಕೊಳ್ಳುವುದೆಂದು ಮಾತುಕತೆಯಾಗಿತ್ತು.

ಈ ಸ್ಫೋಟಕ ಆರೋಪ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ನಿನ್ನೆ ಪ್ರಭಾಕರ್ ಸೈಲ್ ಗೆ ಭದ್ರತೆ ನೀಡಲು ಮುಂದಾಗಿದೆ. ಈ ಮಧ್ಯೆ, ನಾಪತ್ತೆಯಾಗಿದ್ದ ಪ್ರಕರಣದ ಮತ್ತೊಬ್ಬ ಸಾಕ್ಷಿ ಗೊಸವಿ ತಮ್ಮ ಜೀವಕ್ಕೆ ಬೆದರಿಕೆಯಿದ್ದು ಮುಂಬೈ ಪೊಲೀಸರ ಮೇಲೆ ತನಗೆ ನಂಬಿಕೆಯಿಲ್ಲ ಎಂದು ಹೇಳಿರುವುದಲ್ಲದೆ ಸೈಲ್ ಮಾಡಿರುವ ಆರೋಪ ನಿರಾಧಾರ, ತಾನು ಉತ್ತರ ಪ್ರದೇಶದಲ್ಲಿ ಪೊಲೀಸರಿಗೆ ಶರಣಾಗುವುದಾಗಿ ಹೇಳಿದ್ದಾರೆ.

ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಗೋಸಾವಿ ಪುಣೆಯಲ್ಲಿ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಿರುವ ಕೇಸಿನಲ್ಲಿ ಕೂಡ ಪೊಲೀಸರಿಗೆ ಬೇಕಾಗಿದ್ದಾರೆ. ಹಲವು ಸುದ್ದಿ ವಾಹಿನಿಗಳಿಗೆ ರಹಸ್ಯ ಸ್ಥಳದಿಂದ ಪ್ರತಿಕ್ರಿಯೆ ನೀಡಿರುವ ಗೊಸವಿ ಲಂಚ ಆರೋಪ ನಿರಾಧಾರ ಮತ್ತು ಸುಳ್ಳು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com