ಕ್ರೂಸ್ ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಗೆ ಜಾಮೀನು ಸಿಕ್ಕರೂ ಇಂದು ಬಿಡುಗಡೆ ಭಾಗ್ಯ ಇಲ್ಲ
ಮುಂಬೈ ತೀರದಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಿಂಗಳ ಆರಂಭದಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರಿಗೆ ಗುರುವಾರ...
Published: 29th October 2021 08:29 PM | Last Updated: 29th October 2021 08:29 PM | A+A A-

ಆರ್ಯನ್ ಖಾನ್
ಮುಂಬೈ: ಮುಂಬೈ ತೀರದಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಿಂಗಳ ಆರಂಭದಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರಿಗೆ ಗುರುವಾರ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ್ದರೂ ಶುಕ್ರವಾರ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ಆರ್ಯನ್ ಖಾನ್ ಮತ್ತೊಂದು ರಾತ್ರಿ ಜೈಲಿನಲ್ಲಿಯೇ ಕಳೆಯಬೇಕಾಗಿದೆ.
ಆರ್ಥರ್ ರೋಡ್ ಜೈಲಿನ ಅಧಿಕಾರಿಗಳ ಪ್ರಕಾರ, ಆರ್ಯನ್ ಖಾನ್ ಅವರನ್ನು ಶನಿವಾರ ಬೆಳಗ್ಗೆ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ.
ಇದನ್ನು ಓದಿ: ಕ್ರೂಸ್ ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್, ಇತರ ಇಬ್ಬರಿಗೆ ಬಾಂಬೆ ಹೈಕೋರ್ಟ್ ನಿಂದ ಜಾಮೀನು
“ನಾವು ಯಾರಿಗೂ ವಿಶೇಷ ಆತಿಥ್ಯ ನೀಡುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ. ಜಾಮೀನು ಪೇಪರ್ ಗಳು ಸ್ವೀಕರಿಸಲು ಸಂಜೆ 5. 30ಕ್ಕೆ ಕಾಲಾವಕಾಶ ಇದೆ. ಆದರೆ ಸಕಾಲಕ್ಕೆ ಪೇಪರ್ ಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಇಂದು ಅವರನ್ನು ಬಿಡುಗಡೆ ಮಾಡುವುದಿಲ್ಲ” ಜೈಲು ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಆರ್ಯನ್ ಖಾನ್ ಅವರ ಕಾನೂನು ತಂಡ, "ಸಂಜೆ 7 ಗಂಟೆಯವರೆಗೆ ಪೇಪರ್ ಗಳನ್ನು ಸ್ವೀಕರಿಸಿ ಬಿಡುಗಡೆ ಮಾಡಬಹುದು" ಎಂದು ಹೇಳಿದ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಈ ಸಮರ್ಥನೆ ನೀಡಿದ್ದಾರೆ.
"ಬಿಡುಗಡೆಗಾಗಿ ಆರ್ಥರ್ ರೋಡ್ ಜೈಲಿನ ಹೊರಗಿನ ಜಾಮೀನು ಪೆಟ್ಟಿಗೆಯಲ್ಲಿ ಬಿಡುಗಡೆ ಆದೇಶದ ಭೌತಿಕ ಪ್ರತಿಯನ್ನು ಹಾಕಬೇಕು. ಇದಕ್ಕಾಗಿ ಜೈಲು ಅಧಿಕಾರಿಗಳು ಸಂಜೆ 5.35 ರವರೆಗೆ ಕಾಯುತ್ತಾರೆ" ಎಂದು ಆರ್ಥರ್ ರೋಡ್ ಜೈಲು ಅಧೀಕ್ಷಕ ನಿತಿನ್ ವಾಯ್ಚಲ್ ಅವರು ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದ ಮುಂಬೈನ ಅರ್ತರ್ ರೋಡ್ ಜೈಲಿನಲ್ಲಿ ಬಂಧಿಯಾಗಿರುವ ಆರ್ಯನ್ ಖಾನ್ ಗೆ ಅವರಿಗೆ ನಿನ್ನೆ ಜಾಮೀನು ಸಿಕ್ಕಿದ್ದು, ನಾಳೆ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಮಾದಕ ವಸ್ತುಗಳ ಬಳಕೆ, ಮಾರಾಟ ಸೇರಿದಂತೆ ಅನೇಕ ಆರೋಪಗಳನ್ನು ಆರ್ಯನ್ ಖಾನ್ ಮೇಲೆ ಎನ್ ಸಿ ಬಿ ಹೊರಿಸಿದೆ.