ಅಸ್ಸಾಂ ಪೊಲೀಸರಿಂದ ಗನ್ ಪಾಯಿಂಟ್ ನಲ್ಲಿ ಜೆಸಿಬಿ ಆಪರೇಟರ್ ಅಪಹರಣ: ಮಿಜೋರಾಂ ಆರೋಪ

ಅಂತರ್ ರಾಜ್ಯ ಗಡಿ ಬಳಿ ಗನ್ ಅಸ್ಸಾಂ ಪೊಲೀಸರಿಂದ ಗನ್ ಪಾಯಿಂಟ್ ನಲ್ಲಿ ಜೆಸಿಬಿ ಆಪರೇಟರ್ ಒಬ್ಬರನ್ನು ಅಪಹರಿಸಲಾಗಿದೆ ಎಂದು ಮಿಜೋರಾಂ ಸರ್ಕಾರ ಗುರುವಾರ ಆರೋಪಿಸಿದೆ. 
ಅಸ್ಸಾಂ ಪೊಲೀಸರು
ಅಸ್ಸಾಂ ಪೊಲೀಸರು

ಗುವಾಹಟಿ: ಅಂತರ್ ರಾಜ್ಯ ಗಡಿ ಬಳಿ ಗನ್ ಅಸ್ಸಾಂ ಪೊಲೀಸರಿಂದ ಗನ್ ಪಾಯಿಂಟ್ ನಲ್ಲಿ ಜೆಸಿಬಿ ಆಪರೇಟರ್ ಒಬ್ಬರನ್ನು ಅಪಹರಿಸಲಾಗಿದೆ ಎಂದು ಮಿಜೋರಾಂ ಸರ್ಕಾರ ಗುರುವಾರ ಆರೋಪಿಸಿದೆ. 

ಗುರುವಾರ ಮಧ್ಯಾಹ್ನ ಐತ್ಲಾಂಗ್ ನಲ್ಲಿ  ಜೂಮ್ ಲ್ಯಾಂಡ್ ಗೆ ಸಂಪರ್ಕಿಸುವ ರಸ್ತೆ ಕಾಮಗಾರಿಯನ್ನು ರೈತರು ಮಾಡುತ್ತಿರುವಾಗಿ ಅಲ್ಲಿಗೆ ಬಂದ ಅಸ್ಸಾಂ ಪೊಲೀಸರು ಕೆಲಸಕ್ಕೆ ಅಡ್ಡಿಯನ್ನುಂಟು ಮಾಡಿದ್ದು, ಜೆಸಿಬಿ ಆಪರೇಟರ್ ನಿಂದ ಕೀಯನ್ನು ಕಿತ್ತುಕೊಂಡಿದ್ದಾರೆ. ವಿಶ್ವಾಸಾರ್ಹ ನಂಬಿಕೆಗಳ ಆಧಾರದ ಮೇಲೆ ಇದು ನನ್ನ ಗಮನಕ್ಕೆ ಬಂದಿರುವುದಾಗಿ ಮಿಜೋರಾಂನ ಕೊಲಾಸಿಬ್ ಜಿಲ್ಲಾಧಿಕಾರಿ ಹೆಚ್ ಲಾತ್ ಲಾಂಗ್ಲಿಯಾನ ಅಸ್ಸಾಂನ ಹೈಲಕಂಡಿ ಜಿಲ್ಲಾಧಿಕಾರಿ ರೋಹನ್ ಝಾಗೆ  ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಕಮಾಂಡೋ ಸಮವಸ್ತ್ರದಲ್ಲಿದ್ದ ಅಸ್ಸಾಂ ಪೊಲೀಸರು ಜೆಸಿಬಿ ಆಪರೇಟರ್ ತಲೆಗೆ ಗನ್ ಪಾಯಿಂಟ್ ಇಟ್ಟು ಅಪಹರಿಸಿದ್ದಾರೆ. ನಂತರ ಆತನನ್ನು ಎಳೆದುಕೊಂಡು ಹೋಗಿ. ಬಟ್ಟೆಗಳನ್ನು ಹರಿದುಹಾಕಿ, ಬೆದರಿಕೆವೊಡ್ಡಲಾಗಿದೆ. ಜೆಸಿಬಿ ಕೀ ನೊಂದಿಗೆ ಮೊಬೈಲ್ ಫೋನ್ ನನ್ನು ಕಿತ್ತುಕೊಳ್ಳಲಾಗಿದೆ. ಇದು ಗಂಭೀರವಾದ ವಿಚಾರವಾಗಿದ್ದು, ಶಾಂತಿ ಸ್ಥಾಪಿಸುವಲ್ಲಿ ದೊಡ್ಡ ಹಿನ್ನಡೆಯಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಕೂಡಲೇ ಮಧ್ಯ ಪ್ರವೇಶಿಸಿ, ಅಪರಾಧಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು, ಜೆಸಿಬಿ ಮಾಲೀಕರಿಗೆ ವಸ್ತುಗಳನ್ನು ಹಿಂತಿರುಗಿಸಬೇಕು, ಆಪಹರಣಗೊಂಡಿರುವ ಜೆಸಿಬಿ ಆಪರೇಟರ್ ನ್ನು ಬಿಡುಗಡೆ ಮಾಡಬೇಕೆಂದು ಅವರು ಝಾ ಅವರನ್ನು ಒತ್ತಾಯಿಸಿದ್ದಾರೆ. ಆದರೆ, ಈ ಬಗ್ಗೆ ಹೈಲಕಂಡಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com