ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ ದಾಖಲೆಯ 11.91 ಲಕ್ಷ ಜನರಿ ಕೋವಿಡ್ ಲಸಿಕೆ

ಮಹಾರಾಷ್ಟ್ರದಲ್ಲಿ ಶನಿವಾರ ದಾಖಲೆಯ 11.91 ಲಕ್ಷ ಜನರಿಗೆ ಕೊವಿಡ್ -19 ಲಸಿಕೆ ನೀಡಲಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಒಂದು ದಿನದ ವ್ಯಾಕ್ಸಿನೇಷನ್ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಶನಿವಾರ ದಾಖಲೆಯ 11.91 ಲಕ್ಷ ಜನರಿಗೆ ಕೊವಿಡ್ -19 ಲಸಿಕೆ ನೀಡಲಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಒಂದು ದಿನದ ವ್ಯಾಕ್ಸಿನೇಷನ್ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ ಎಂದು ರಾಜ್ಯ ಸಾರ್ವಜನಿಕ ಆರೋಗ್ಯ ಇಲಾಖೆಯು ಅಧಿಕೃತವಾಗಿ ಮಾಹಿತಿ ನೀಡಿದೆ.

ಈ ಹಿಂದೆ ಆಗಸ್ಟ್ 21 ರಂದು, ರಾಜ್ಯದಲ್ಲಿ ಒಂದೇ ದಿನದಲ್ಲಿ 11.04 ಲಕ್ಷ ಡೋಸ್ ಲಸಿಕೆ ನೀಡಲಾಗಿತ್ತು. 

ಸಾರ್ವಜನಿಕ ಆರೋಗ್ಯ ಇಲಾಖೆ ಹೊರಡಿಸಿದ ಪ್ರಕಟಣೆಯ ಪ್ರಕಾರ, ಇಂದು 11,91,921 ಜನರು ಲಸಿಕೆ ಪಡೆದಿದ್ದಾರೆ. ರಾಜ್ಯದಲ್ಲಿ ಒಟ್ಟು 6.27 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.

"ಶನಿವಾರ ಸಂಜೆ 7 ಗಂಟೆಯವರೆಗೆ 11,91,921 ಡೋಸ್ ಲಸಿಕೆ ನೀಡಲಾಗಿದ್ದು, ರಾತ್ರಿಯವರೆಗೂ ವ್ಯಾಕ್ಸಿನೇಷನ್ ಡ್ರೈವ್ ಮುಂದುವರಿಯುತ್ತದೆ. ಅಂತಿಮ ಅಂಕಿ ಅಂಶ ನಾಳೆ ದೊರೆಯಲಿದೆ" ಎಂದು ಸಾರ್ವಜನಿಕ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಪ್ರದೀಪ್ ವ್ಯಾಸ್ ಅವರು ಹೇಳಿದ್ದಾರೆ.

ಇಲಾಖೆಯ ಪ್ರಕಾರ, ಮಹಾರಾಷ್ಟ್ರ ಉತ್ತರ ಪ್ರದೇಶದ ನಂತರ ಅತಿ ಹೆಚ್ಚು ಡೋಸ್ ಕೋವಿಡ್ ಲಸಿಕೆ ನೀಡುವ ಮೂಲಕ ದೇಶದಲ್ಲಿ ಎರಡನೆಯ ಸ್ಥಾನದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com