'ಸ್ವಂತ ಗೂಡು ಕಟ್ಟದೇ ಮತ್ತೊಬ್ಬರ ಹೆಗಲನ್ನು ಆಶ್ರಯಿಸುವ ರಾಹುಲ್, ಭಾರತ ರಾಜಕಾರಣದ ರಾಜಕೀಯ ಕೋಗಿಲೆ’
ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ‘ಭಾರತದ ರಾಜಕಾರಣದ ರಾಜಕೀಯ ಕೋಗಿಲೆ’ ಎಂದು ಬಿಜೆಪಿ ಟೀಕಿಸಿದೆ.
Published: 07th September 2021 09:13 AM | Last Updated: 07th September 2021 09:13 AM | A+A A-

ರಾಹುಲ್ ಗಾಂಧಿ
ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ‘ಭಾರತದ ರಾಜಕಾರಣದ ರಾಜಕೀಯ ಕೋಗಿಲೆ’ ಎಂದು ಬಿಜೆಪಿ ಟೀಕಿಸಿದೆ.
ಸೋಮವಾರ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ‘ರಾಹುಲ್ ತಳಮಟ್ಟದಲ್ಲಿ ಕೆಲಸ ಮಾಡುವುದಿಲ್ಲ. ಅವರು ತಮ್ಮ ರಾಜಕೀಯ ಕಾರ್ಯಸೂಚಿಗಾಗಿ ಮತ್ತೊಬ್ಬರ ಹೆಗಲನ್ನು ಬಳಸುತ್ತಾರೆ. ‘ಹೇಗೆ ಕೋಗಿಲೆ ತನ್ನ ಸ್ವಂತ ಗೂಡು ಕಟ್ಟಿಕೊಳ್ಳದೇ ಮತ್ತೊಬ್ಬರ ಗೂಡನ್ನು ಆಶ್ರಯಿಸುತ್ತದೋ, ಅಂತೆಯೇ ರಾಹುಲ್ ಕೂಡಾ ಕಷ್ಟಪಟ್ಟು ಕೆಲಸ ಮಾಡುವುದಿಲ್ಲ. ಅದಕ್ಕಾಗಿ ಮತ್ತೊಬ್ಬರ ಹೆಗಲನ್ನು ಆಶ್ರಯಿಸುತ್ತಾರೆ.
ರಾಹುಲ್ ಒಂದು ರೀತಿಯಲ್ಲಿ ಭಾರತದ ರಾಜಕೀಯ ಕೋಗಿಲೆ ಇದ್ದಂತೆ. ಕಾಂಗ್ರೆಸ್‌ಗೆ ಕಾಯಂ ಅಧ್ಯಕ್ಷರಿಲ್ಲ. ಸೋನಿಯಾ ಗಾಂಧಿ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿದ್ದಾರೆ. ಹಾಗಾಗಿ, ಕಾಂಗ್ರೆಸ್ ನೆಲಮಟ್ಟದ ಸಮಸ್ಯೆಗಳನ್ನು ಪ್ರಶ್ನಿಸುವಲ್ಲಿ ವಿಫಲವಾಗಿದೆ. ಸೋನಿಯಾ ಅವರು ಇತರಪಕ್ಷಗಳೊಂದಿಗೆ ವರ್ಚುವಲ್ ಸಭೆ ನಡೆಸುತ್ತಾರೆ’ ಎಂದಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ರೈತ ಒಕ್ಕೂಟಗಳ ಕುರಿತು ಪ್ರತಿಕ್ರಿಯಿಸಿದ ಸಂಬಿತ್, ‘ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ರೈತರಿಗೆ ಸಮರ್ಪಿತವಾಗಿದೆ. ಮುಂದೆಯೂ ಅವರು ಹಾಗೇ ಇರುತ್ತಾರೆ ಎಂದು ಹೇಳಿದ್ದಾರೆ.