The New Indian Express
ನವದೆಹಲಿ: ಬುಧವಾರ ರಾಜ್ಯದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ನಿವಾಸದ ಎದುರು ಬಾಂಬ್ ಸ್ಫೋಟಕ್ಕೆ ರಾಜ್ಯಪಾಲರ ಖಂಡನೆ ಅವರ ನಿವಾಸದ ಎದುರು ಸಂಭವಿಸಿದ ಸ್ಫೋಟ ಪ್ರಕರಣವನ್ನು ರಾಜ್ಯಪಾಲ ಜಗ್ ದೀಪ್ ಧನ್ಕರ್ ತೀವ್ರವಾಗಿ ಖಂಡಿಸಿದ್ದಾರೆ.
ಇದನ್ನೂ ಓದಿ: ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಸಚಿನ್ ವಾಜೆ ಮತ್ತೆ 'ಸೂಪರ್ಕಾಪ್' ಆಗಲು ಬಯಸಿದ್ದರು; ಎನ್ಐಎ
ಪ. ಬಂಗಾಳದಲ್ಲಿ ಹಿಂಸಾಚಾರ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಈ ಘಟನೆ ಸೂಚಿಸುತ್ತದೆ ಎಂದು ಜಗ್ ದೀಪ್ ಧನ್ಕರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಬಾಂಬ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗನೆ ಅಪರಾಧಿಗಳನ್ನು ಪತ್ತೆ ಹಚ್ಚುವಂತೆ ರಾಜ್ಯಪಾಲರು ಪೊಲೀಸರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಜೆಲಟಿನ್ ಕಡ್ಡಿಗಳಿದ್ದ ಕಾರು ಸ್ಫೋಟ: ಕಾರು ಮತ್ತು ಚಾಲಕ ಛಿದ್ರ ಛಿದ್ರ
ರಾಜ್ಯದ 24 ನಾರ್ಥ್ ಪರಗಣ ಜಿಲ್ಲೆಯಲ್ಲಿರುವ ಬಿಜೆಪಿ ಸಂಸದ ಅರ್ಜುನ್ ಸಿಂಗ್ ನಿವಾಸದ ಎದುರು ಬುಧವಾರ ಬೆಳಿಗ್ಗೆ ೬.೩೦ರ ಸುಮಾರಿಗೆ ಕಚ್ಛಾ ಬಾಂಬುಗಳನ್ನು ಸ್ಫೋಟಿಸಲಾಗಿತ್ತು.
ಒಟ್ಟು ಮೂರು ಬಾಂಬುಗಳು ಸ್ಫೋಟಗೊಂಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.