ಮುಂದಿನ 2 ದಶಕಗಳಲ್ಲಿ 350 ದೇಶೀಯ ಯುದ್ಧವಿಮಾನಗಳ ಖರೀದಿ: ಬದೌರಿಯಾ
ಸ್ಥಳೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ಎರಡು ದಶಕಗಳಲ್ಲಿ ಭಾರತೀಯ ವಾಯುಪಡೆ 350 ದೇಶೀಯವಾಗಿ ತಯಾರಿಸಿದ ಸ್ಥಿರ ವಿಂಗ್ ವಿಮಾನಗಳನ್ನು ಖರೀದಿಸಲಿದೆ ಎಂದು ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಬುಧವಾರ ಹೇಳಿದರು.
Published: 08th September 2021 10:06 PM | Last Updated: 08th September 2021 10:06 PM | A+A A-

ಭಾರತೀಯ ವಾಯುಪಡೆ ಮುಖ್ಯಸ್ಥ ಆರ್ ಕೆಎಸ್ ಭದೌರಿಯಾ
ನವದೆಹಲಿ: ಸ್ಥಳೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ಎರಡು ದಶಕಗಳಲ್ಲಿ ಭಾರತೀಯ ವಾಯುಪಡೆ 350 ದೇಶೀಯವಾಗಿ ತಯಾರಿಸಿದ ಸ್ಥಿರ ವಿಂಗ್ ವಿಮಾನಗಳನ್ನು ಖರೀದಿಸಲಿದೆ ಎಂದು ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಬುಧವಾರ ಹೇಳಿದರು.
ಸೊಸೈಟಿ ಫಾರ್ ಇಂಡಿಯನ್ ಡಿಫೆನ್ಸ್ ಮ್ಯಾನುಫ್ಯಾಕ್ಚರರ್ಸ್ (ಎಸ್ಐಡಿಎಂ) ಮತ್ತು ಐಎಎಫ್ ಬೆಂಬಲಿತ ಥಿಂಕ್-ಟ್ಯಾಂಕ್, ಸೆಂಟರ್ ಫಾರ್ ಏರ್ ಪವರ್ ಸ್ಟಡೀಸ್ (CAPS) "ಆಯೋಜಿಸಿದ ಆತ್ಮನಿರ್ಭರ್ ಭಾರತ್ ಗಾಗಿ ಭಾರತೀಯ ಏರೋಸ್ಪೇಸ್ ಇಂಡಸ್ಟ್ರಿ ಸವಾಲುಗಳು"ಕುರಿತ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹೊಸ ಖರೀದಿ 83 ಲಘು ಯುದ್ಧ ವಿಮಾನ ತೇಜಸ್ ಅನ್ನು ಒಳಗೊಂಡಿರುತ್ತದೆ ಎಂದರು.
ಸ್ಥಳೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ 'ಸ್ಥಾಪಿತ ಸಾಮರ್ಥ್ಯಗಳು' ಮತ್ತು 'ಸ್ಥಾಪಿತ ತಂತ್ರಜ್ಞಾನ' ಅಳವಡಿಸಿಕೊಳ್ಳಬೇಕು. ವಾಯುಪಡೆಗೆ ತಾಂತ್ರಿಕ ಸಾಮರ್ಥ್ಯಗಳ ಪರಿಚಯ ಒಂದು ಸವಾಲಾಗಿ ಉಳಿದಿದೆ. ನಮ್ಮ ಉತ್ತರದ ನೆರೆರಾಷ್ಟ್ರಗಳ ಸಾಮರ್ಥ್ಯ ಪರಿಗಣಿಸಿ, ದೇಶದಲ್ಲಿ ಸ್ಥಾಪಿತ ಸಾಮರ್ಥ್ಯಗಳು ಮತ್ತು ಸ್ಥಾಪಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.