ಕೃಷಿ ಕಾಯಿದೆ ವಿರೋಧಿಸಿ ಸೆ. 27 ರಂದು ರೈತ ಸಂಘಟನೆಗಳಿಂದ 'ಭಾರತ್ ಬಂದ್'

ಕೇಂದ್ರದ ಮೂರು ಕೃಷಿ ಸುಧಾರಣಾ ಕಾಯಿದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 27 ರಂದು 'ಭಾರತ್ ಬಂದ್' ಗೆ ಕರೆ ನೀಡಿದೆ. 
ರೈತರ ಪ್ರತಿಭಟನೆ
ರೈತರ ಪ್ರತಿಭಟನೆ

ನವದೆಹಲಿ: ಕೇಂದ್ರದ ಮೂರು ಕೃಷಿ ಸುಧಾರಣಾ ಕಾಯಿದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 27 ರಂದು 'ಭಾರತ್ ಬಂದ್' ಗೆ ಕರೆ ನೀಡಿದೆ. 

ಲಖನೌದಲ್ಲಿ ನಡೆದ ಎರಡು ದಿನಗಳ ರೈತ ಸಂಘದ ಸಭೆಯ ನಂತರ ಈ ತೀರ್ಮಾನ ಮಾಡಲಾಗಿದೆ. ಉದ್ದೇಶಿತ ರಾಷ್ಟ್ರವ್ಯಾಪಿ ಪ್ರತಿಭಟನೆ  ಯಶಸ್ವಿಗೊಳಿಸಲು, ರೈತ ಸಂಘಟನೆಗಳು ಇದೆ 17 ರಿಂದ ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ  ಯುವ ಸಂಘಟನೆಗಳು, ಸಾರಿಗೆ ಸಂಘಗಳು ಮತ್ತು ವ್ಯಾಪಾರ ಸಂಸ್ಥೆಗಳೊಂದಿಗೆ ಸಭೆ ನಡೆಸಲಿವೆ.

ನಗರ ಪ್ರದೇಶಗಳಲ್ಲಿ ಭಾರತ್ ಬಂದ್ ಆಚರಿಸಲು ರೈತ ಮುಖಂಡರು ಮತ್ತು ವಿವಿಧ ಉದ್ಯೋಗಿಗಳ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳ ಸಂಪರ್ಕ ಸಾಧಿಸಲಿದ್ದಾರೆ. ಪ್ರತಿಭಟನಾ ಸಮಯದಲ್ಲಿ ರೈತರ ಮೇಲೆ ಲಾಠಿಪ್ರಹಾರ ಮಾಡಿದ  ಪೊಲೀಸರು ಮತ್ತು ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತ ಸಂಘಟನೆಗಳು ಆಗ್ರಹಪಡಿಸಲಿದ್ದಾರೆ.

ಲಖನೌನಲ್ಲಿ ನಡೆದ ಸಭೆಯಲ್ಲಿ 85 ರೈತ ಸಂಘಗಳು ಭಾಗವಹಿಸಿದ್ದವು, ಅವರ ನಾಯಕರು ಮಿಷನ್ ಉತ್ತರ ಪ್ರದೇಶದ ಯೋಜನೆಗಳನ್ನು ರೂಪಿಸಲು ಸಹಾಯ ಮಾಡಿದರು. ಹರ್ನಮ್ ವರ್ಮ, ಡಿಪಿ ಸಿಂಗ್ ಮತ್ತು ತೇಜಿಂದರ್ ಸಿಂಗ್ ವಿರ್ಕ್ ಅವರನ್ನೊಳಗೊಂಡ ಮೂರು ಸದಸ್ಯರ ಸಮನ್ವಯ ಸಮಿತಿಯನ್ನು ರಚಿಸಲಾಯಿತು. ಇದು ಭಾರತ್ ಬಂದ್‌ ಹೋರಾಟದ ರೂಪರೇಷಗಳನ್ನು ಸಿದ್ಧಪಡಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com