ಆರ್ ಎಸ್ಎಸ್, ಬಿಜೆಪಿ ಕಾಶ್ಮೀರದ ಸಂಯೋಜಿತ ಸಂಸ್ಕೃತಿಯನ್ನು ಒಡೆಯಲು ಯತ್ನಿಸುತ್ತಿದೆ: ರಾಹುಲ್ ಗಾಂಧಿ

ಜಮ್ಮು ಮತ್ತು ಕಾಶ್ಮೀರದ ಸಂಯೋಜಿತ ಸಂಸ್ಕೃತಿಯನ್ನು ಒಡೆಯಲು ಆರ್ ಎಸ್ಎಸ್ ಮತ್ತು ಬಿಜೆಪಿ ಒಗ್ಗೂಡಿರುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಂಯೋಜಿತ ಸಂಸ್ಕೃತಿಯನ್ನು ಒಡೆಯಲು ಆರ್ ಎಸ್ಎಸ್ ಮತ್ತು ಬಿಜೆಪಿ ಒಗ್ಗೂಡಿರುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.

ಜಮ್ಮು ಪ್ರವಾಸ ಎರಡನೇ ದಿನವಾದ ಇಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ನಿಮ್ಮೆಲ್ಲರ ನಡುವೆ ಪ್ರೀತಿ, ಸಹೋದರತ್ವ ಮತ್ತು ಸಮ್ಮಿಶ್ರ ಸಂಸ್ಕೃತಿಯ ಭಾವನೆ ಇದೆ. ಈ ಸಂಸ್ಕೃತಿಯನ್ನು ಮುರಿಯಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಪ್ರಯತ್ನಿಸುತ್ತಿರುವುದಕ್ಕೆ ನನಗೆ ಬೇಸರವಾಗಿದೆ" ಎಂದರು.

"ಅವರು (ಆರ್‌ಎಸ್‌ಎಸ್, ಬಿಜೆಪಿ) ಪ್ರೀತಿ ಮತ್ತು ಸಹೋದರತ್ವದ ಮೇಲೆ ದಾಳಿ ಮಾಡುತ್ತಾರೆ! ಹೀಗಾಗಿ ನೀವು ದುರ್ಬಲಗೊಂಡಿದ್ದೀರಿ ಮತ್ತು ಇದರ ಪರಿಣಾಮವಾಗಿ ಅವರು ನಿಮ್ಮ ರಾಜ್ಯತ್ವವನ್ನು ಕಸಿದುಕೊಂಡರು" ಎಂದು ರಾಹುಲ್ ಹೇಳಿದರು.

ಭಾರತೀಯ ಜನತಾ ಪಕ್ಷದ(ಬಿಜೆಪಿ) ನೇತೃತ್ವದ ಸರ್ಕಾರದ ಸೈದ್ಧಾಂತಿಕ ಮೂಲ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಕೇಂದ್ರ ಎಂದರು.

ಕತ್ರಾದ ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ಒಂದು ದಿನದ ನಂತರ ಕಾಂಗ್ರೆಸ್ ನಾಯಕ 'ಜೈ ಮಾತಾ ದಿ' ಘೋಷಣೆ ಕೂಗಲು ಪ್ರೇರೇಪಿಸಿದರು.

"ನಾನು ನಿನ್ನೆ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಹೋಗಿದ್ದೆ. ಅಲ್ಲಿ ಮಾತೆಯ(ಪಿಂಡಿ) ಮೂರು ಸಂಕೇತಗಳಿವೆ - ಮಾತಾ ದುರ್ಗಾ, ಮಾತಾ ಲಕ್ಷ್ಮಿ ಮತ್ತು ಮಾತಾ ಸರಸ್ವತಿ" ಎಂದು ರಾಹುಲ್ ಗಾಂಧಿ ಹೇಳಿದರು.

ದುರ್ಗಾ ದೇವಿಯು ನಮ್ಮನ್ನು ರಕ್ಷಿಸುತ್ತಾಳೆ, ಲಕ್ಷ್ಮಿ ಶಕ್ತಿಯ ಸಂಕೇತ, ಸರಸ್ವತಿ ಶಿಕ್ಷಣ ಮತ್ತು ಜ್ಞಾನದ ಸಂಕೇತ ಎಂದು ಅವರು ಹೇಳಿದರು.

"ಈ ಮೂರು ಶಕ್ತಿಗಳು ನಿಮ್ಮ ಮನೆ ಮತ್ತು ದೇಶದಲ್ಲಿ ಇದ್ದಾಗ, ನಿಮ್ಮ ಮನೆ ಮತ್ತು ದೇಶವು ಪ್ರಗತಿಯನ್ನು ಸಾಧಿಸುತ್ತದೆ" ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com