ನಾಪತ್ತೆಯಾಗಿದ್ದ ಫ್ರೆಂಚ್ ಮಹಿಳೆಯ ಮೃತದೇಹ ಗೋಣಿಚೀಲದಲ್ಲಿ ಪತ್ತೆ; ದತ್ತು ಪುತ್ರಿ ಮೇಲೆ ಶಂಕೆ

ನಾಪತ್ತೆಯಾಗಿದ್ದ ಫ್ರೆಂಚ್ ದೇಶದ ಮಹಿಳೆ ಮೇರಿ ಕ್ರಿಸ್ಟಿನ್ ಅವರ ಮೃತದೇಹ ಶನಿವಾರ ಪತ್ತೆಯಾಗಿದೆ. ಮೇರಿ ಕ್ರಿಸ್ಟಿನ್ ಸೈಬರಾಬಾದ್ ಕಮೀಷನರೇಟ್ ವ್ಯಾಪ್ತಿಗೆ ಬರುವ ರಾಜೇಂದ್ರ ನಗರದ ಕಿಸ್ಮಾತ್ ನಗರದಲ್ಲಿ ವಾಸವಾಗಿದ್ದರು.
ಫ್ರೆಂಚ್ ಮಹಿಳೆ ಮೇರಿ ಕ್ರಿಸ್ಟಿನ್
ಫ್ರೆಂಚ್ ಮಹಿಳೆ ಮೇರಿ ಕ್ರಿಸ್ಟಿನ್

ಹೈದ್ರಾಬಾದ್: ನಾಪತ್ತೆಯಾಗಿದ್ದ ಫ್ರೆಂಚ್ ದೇಶದ ಮಹಿಳೆ ಮೇರಿ ಕ್ರಿಸ್ಟಿನ್ ಅವರ ಮೃತದೇಹ ಶನಿವಾರ ಪತ್ತೆಯಾಗಿದೆ. ಮೇರಿ ಕ್ರಿಸ್ಟಿನ್ ಸೈಬರಾಬಾದ್ ಕಮೀಷನರೇಟ್ ವ್ಯಾಪ್ತಿಗೆ ಬರುವ ರಾಜೇಂದ್ರ ನಗರದ ಕಿಸ್ಮಾತ್ ನಗರದಲ್ಲಿ ವಾಸವಾಗಿದ್ದರು.

ಮೇರಿ ಕ್ರಿಸ್ಟಿನ್ ದತ್ತು ಪುತ್ರಿ ಮತ್ತು ಆಕೆಯ ಪಾರ್ಟನರ್ ಆಕೆಯನ್ನು ಮನೆಯಲ್ಲಿಯೇ ಹತ್ಯೆ ಮಾಡಿದ್ದು, ಗೋಣಿಚೀಲದಲ್ಲಿ ಪ್ಯಾಕ್ ಮಾಡಿ,  ಹಿಮಾಯತ್ ಸಾಗರ ಸರೋವರದ ಬಳಿ ಪೊದೆಗಳಲ್ಲಿ ಅವಶೇಷಗಳನ್ನು ಎಸೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ದತ್ತು ಪುತ್ರಿ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಳು. ಇದೇ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತಿತ್ತು, ಅಂತಿಮವಾಗಿ ಇದೇ ಹತ್ಯೆಗೆ ಕಾರಣವಾಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. 

ಎರಡು ದಶಕಗಳ ಹಿಂದೆ ತನ್ನಿಬ್ಬರು ಮಕ್ಕಳೊಂದಿಗೆ ಹೈದ್ರಾಬಾದಿಗೆ ಬಂದಿದ್ದ ಮೃತ ಮಹಿಳೆ ಮೇರಿ ಕ್ರಿಸ್ಟಿನ್, ಆಗಿನಿಂದಲೂ ಮಾರಿಕಾ ಸಮೂಹದ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದರು. ಈ ಆಕೆಯ ಪುತ್ರಿಯರು ಮದುವೆಯಾಗಿ ಹೋದ ನಂತರ ಹುಡುಗಿಯೊಬ್ಬಳನ್ನು ದತ್ತು ಪಡೆದು ಆಕೆಯೊಂದಿಗೆ ಕ್ರಿಸ್ಟಿನ್ ವಾಸಿಸುತ್ತಿದ್ದಳು. ಇತ್ತೀಚಿಗೆ ಆ ಹುಡುಗಿಗೆ ಹುಡುಗನೊಬ್ಬನೊಂದಿಗೆ ಸಂಬಂಧವೇರ್ಪಟ್ಟಿತ್ತು. ಆಗಿನಿಂದಲೂ ಆಸ್ತಿಯಲ್ಲಿ ಪಾಲಿಗಾಗಿ ಜನಗಳ ನಡೆಯುತಿತ್ತು ಎನ್ನಲಾಗಿದೆ.

ಶಂಕಿತರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮುಂದಿನ  ತನಿಖೆ ನಡೆಯುತ್ತಿದೆ ಎಂದು ರಾಜೇಂದ್ರ ನಗರದ ಎಸಿಪಿ ಸಂಜಯ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com