ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ನರೇಂದ್ರ ಸಿಂಗ್ ತೋಮರ್
ದೇಶ
ಹೊಸ ಸಿಎಂ ಆಯ್ಕೆ ಪ್ರಕ್ರಿಯೆ: ಗುಜರಾತ್ ಗೆ ತೆರಳಿದ ಇಬ್ಬರು ಕೇಂದ್ರ ಸಚಿವರು
ಗುಜರಾತ್ ಗೆ ಹೊಸ ಸಿಎಂ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಇಬ್ಬರು ಕೇಂದ್ರ ಸಚಿವರು ರಾಜ್ಯಕ್ಕೆ ತೆರಳಿದ್ದಾರೆ.
ಅಹ್ಮದಾಬಾದ್: ಗುಜರಾತ್ ಗೆ ಹೊಸ ಸಿಎಂ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಇಬ್ಬರು ಕೇಂದ್ರ ಸಚಿವರು ರಾಜ್ಯಕ್ಕೆ ತೆರಳಿದ್ದಾರೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಸಿಎಂ ಆಯ್ಕೆಗೆ ವೀಕ್ಷಕರೆಂದು ನೇಮಕ ಮಾಡಲಾಗಿದ್ದು ಭಾನುವಾರ ಗುಜರಾತ್ ಗೆ ತಲುಪಿದ್ದಾರೆ.
"ನಾವು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಇತರ ನಾಯಕರೊಂದಿಗೆ ನೂತನ ಸಿಎಂ ಆಯ್ಕೆ ಪ್ರಕ್ರಿಯೆ ಬಗ್ಗೆ ಚರ್ಚಿಸಲಿದ್ದೇವೆ" ಎಂದು ತೋಮರ್ ಅಹ್ಮದಾಬಾದ್ ನಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಗೆ ಇನ್ನು 15 ತಿಂಗಳು ಬಾಕಿ ಇದ್ದು, ಸಿಎಂ ಸ್ಥಾನಕ್ಕೆ ವಿಜಯ್ ರುಪಾನಿ ರಾಜೀನಾಮೆ ನೀಡಿದ್ದರು.
ಸೆ.12 ರಂದು ಶಾಸಕಾಂಗ ಸಭೆಯಲ್ಲಿ ಗುಜರಾತ್ ನ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುತ್ತದೆ. ಕೊರೋನಾ ಅವಧಿಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ರಾಜೀನಾಮೆ ನೀಡಿದ ಮುಖ್ಯಮಂತ್ರಿಗಳ ಪೈಕಿ ವಿಜಯ್ ರುಪಾನಿ 4ನೆಯವರಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ