ಪಾಕ್ ಏಜೆಂಟ್‌ಗಳೊಂದಿಗೆ ರಕ್ಷಣಾ ರಹಸ್ಯ ಹಂಚಿಕೊಂಡ ಡಿಆರ್‌ಡಿಒದ 4 ಉದ್ಯೋಗಿಗಳ ಬಂಧನ

ಪಾಕಿಸ್ತಾನದ ಏಜೆಂಟರೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಒಡಿಶಾ ಕರಾವಳಿಯ ಕ್ಷಿಪಣಿ ಪರೀಕ್ಷಾ ಕೇಂದ್ರದಿಂದ ನಾಲ್ವರನ್ನು ಬಂಧಿಸುವ ಮೂಲಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಒ) ಮತ್ತೆ ಗೂಢಚಾರಿಕೆ ಸದ್ದು ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭುವನೇಶ್ವರ: ಪಾಕಿಸ್ತಾನದ ಏಜೆಂಟರೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಒಡಿಶಾ ಕರಾವಳಿಯ ಕ್ಷಿಪಣಿ ಪರೀಕ್ಷಾ ಕೇಂದ್ರದಿಂದ ನಾಲ್ವರನ್ನು ಬಂಧಿಸುವ ಮೂಲಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ(ಡಿಆರ್‌ಡಿಒ) ಮತ್ತೆ ಗೂಢಚಾರಿಕೆ ಸದ್ದು ಮಾಡಿದೆ.

ಗುಪ್ತಚರ ಮಾಹಿತಿ ಆಧರಿಸಿ, ಐಜಿ(ಪೂರ್ವ ಶ್ರೇಣಿ) ಹಿಮಾಶು ಲಾಲ್ ನೇತೃತ್ವದ ಒಡಿಶಾ ಪೊಲೀಸರ ವಿಶೇಷ ತಂಡ, ಮಂಗಳವಾರ ಚಂಡಿಪುರ ಸಮುದ್ರದಲ್ಲಿರುವ ಡಿಆರ್‌ಡಿಒ ಘಟಕದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್(ಐಟಿಆರ್) ನಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದೆ.

ಪರೀಕ್ಷಾ ಸೌಲಭ್ಯದಲ್ಲಿನ ಚಟುವಟಿಕೆಗಳ ಮಾಹಿತಿಗಾಗಿ ಗುತ್ತಿಗೆ ನೌಕರರು ಹನಿ ಟ್ರ್ಯಾಪ್ ಆಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. 

ಚಂಡೀಪುರದಲ್ಲಿ ಡಿಆರ್‌ಡಿಒನ ಎರಡು ಘಟಕಗಳಿವೆ - ಪ್ರೂಫ್ ಮತ್ತು ಎಕ್ಸ್‌ಪೆರಿಮೆಂಟಲ್ ಸ್ಥಾಪನೆ(ಪಿಎಕ್ಸ್‌ಇ) ಮತ್ತು ಐಟಿಆರ್‌ನಿಂದ ಹಲವಾರು ಕ್ಷಿಪಣಿಗಳು ಮತ್ತು ಮದ್ದುಗುಂಡುಗಳನ್ನು ಪರೀಕ್ಷಿಸಲಾಗುತ್ತದೆ.

ಡಿಆರ್ ಡಿಒ ಉದ್ಯೋಗಿಗಳು ಮೊದಲು ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಪಾಕ್ ಏಜೆಂಟರಿಂದ ಸಂದೇಶಗಳನ್ನು ಸ್ವೀಕರಿಸಿದ್ದಾರೆ. ನಂತರ ಅವರು ಧ್ವನಿ ಮತ್ತು ವಿಡಿಯೋ ಕರೆಗಳ ಮೂಲಕ ವಾಟ್ಸಾಪ್‌ನಲ್ಲಿ ಮಾತನಾಡಲು ಆರಂಭಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಏಜೆಂಟರು ನಕಲಿ ಹೆಸರುಗಳನ್ನು ಬಳಸಿ ರಹಸ್ಯ ಮಾಹಿತಿ ಪಡೆಯಲು ಡಿಆರ್ ಡಿಒ ಉದ್ಯೋಗಿಗಳಿಗೆ ಹಣ ವರ್ಗಾಯಿಸಿದ್ದಾರೆ. ಮೂರು ದಿನಗಳ ಕಾಲ ಅವರ ಮೇಲೆ ತೀವ್ರ ನಿಗಾ ವಹಿಸಿದ ನಂತರ, 12 ಸದಸ್ಯರ ಪೊಲೀಸ್ ತಂಡ ಚಂಡಿಪುರ ಪೊಲೀಸ್ ವ್ಯಾಪ್ತಿಯಲ್ಲಿರುವ ಅವರ ಮನೆಗಳಿಂದ ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com