ಬುಡಕಟ್ಟು ಜನಾಂಗದ ನಾಲ್ವರಿಗೆ ಮಧ್ಯಪ್ರದೇಶ ಸಿಎಂ ಅಧಿಕೃತ ಹೆಲಿಕಾಪ್ಟರ್ ನಲ್ಲಿ ಪ್ರಯಾಣದ ಯೋಗ!

ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಜೋಬತ್ ತಹಸಿಲ್‌ನ ಬುಡಕಟ್ಟು ಜನಾಂಗದ ನಾಲ್ವರ ಕನಸು ಬುಧವಾರ ನನಸಾಗಿದ್ದು, ಅವರಿಗೆ ಹೆಲಿಕಾಪ್ಟರ್‌ನಲ್ಲಿ ಹಾರುವ ಅವಕಾಶ ಸಿಕ್ಕಿತ್ತು. ಅದರಲ್ಲೂ ತಮ್ಮ ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್...
ಸಿಎಂ ಅಧಿಕೃತ ಹೆಲಿಕಾಪ್ಟರ್
ಸಿಎಂ ಅಧಿಕೃತ ಹೆಲಿಕಾಪ್ಟರ್

ಅಲಿರಾಜಪುರ: ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಜೋಬತ್ ತಹಸಿಲ್‌ನ ಬುಡಕಟ್ಟು ಜನಾಂಗದ ನಾಲ್ವರ ಕನಸು ಬುಧವಾರ ನನಸಾಗಿದ್ದು, ಅವರಿಗೆ ಹೆಲಿಕಾಪ್ಟರ್‌ನಲ್ಲಿ ಹಾರುವ ಅವಕಾಶ ಸಿಕ್ಕಿತ್ತು. ಅದರಲ್ಲೂ ತಮ್ಮ ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧಿಕೃತ ಹೆಲಿಕಾಪ್ಟರ್ ನಲ್ಲಿ.

ಬುಡಕಟ್ಟು ಪ್ರಾಬಲ್ಯದ ಅಲಿರಾಜಪುರ ಜಿಲ್ಲೆಯ ರಣಬೈಡಾದಿಂದ ಸೇಜವಾಡದವರೆಗೆ ಸಿಎಂ ಹೆಲಿಕಾಪ್ಟರ್‌ನಲ್ಲಿ ಬುಡಕಟ್ಟು ಜನಾಂಗದ ನಾಲ್ವರು ಪ್ರಯಾಣಿಸಿದ್ದಾರೆ. ಆದರೆ ಸಿಎಂ ಚೌಹಾಣ್ ಅವರು ತಮ್ಮ ಜನ ದರ್ಶನ ಯಾತ್ರೆಯ ಭಾಗವಾಗಿ ವಿಧಾನಸಭೆ ಉಪ ಚುನಾವಣೆ ಎದುರಿಸಲಿರುವ ಜೋಬತ್ ಕ್ಷೇತ್ರದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿದ್ದರಿಂದ ರಸ್ತೆ ಮೂಲಕ ಪ್ರಯಾಣಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ನಾಲ್ಕು ಆದಿವಾಸಿಗಳಿಗೆ ಸಿಎಂ ಇಲ್ಲದೆ ಹೆಲಿಕಾಪ್ಟರ್‌ನಲ್ಲಿ ಪ್ರವಾಸ ಕೈಗೊಳ್ಳಲು ಅವಕಾಶ ನೀಡಲಾಯಿತು. ಏಕೆಂದರೆ ಅವರು ಚೌಹಾಣ್ ಅವರು ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಸ್ತೆಯ ಮೂಲಕ ಪ್ರಯಾಣಿಸಬೇಕಿತ್ತು" ಎಂದು ಅವರು ಹೇಳಿದ್ದಾರೆ.

ಬುಡಕಟ್ಟು ಜನಾಂಗದ ದರಿಯವ್ ಸಿಂಗ್, ಮಂಗಲ್ ಸಿಂಗ್, ರಿಚ್ಚು ಸಿಂಗ್ ಬಘೇಲ್ ಮತ್ತು ಜೋಧ್ ಸಿಂಗ್ ಅವರು ಹೆಲಿಕಾಪ್ಟರ್‌ನಲ್ಲಿ ಸುಮಾರು ಅರ್ಧ ಗಂಟೆ ಪ್ರಯಾಣಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕಿ ಕಲಾವತಿ ಭೂರಿಯಾ ನಿಧನದಿಂದ ತೆರವಾದ ಜೋಬತ್‌ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com