ಹೈದರಾಬಾದ್ ಅಪ್ರಾಪ್ತೆ ಮೇಲೆ ಅತ್ಯಾಚಾರ: '10 ಲಕ್ಷ ಬಹುಮಾನ' ಘೋಷಿಸಿದ ಪೊಲೀಸರು, 'ಎನ್ಕೌಂಟರ್' ಪ್ರತಿಜ್ಞೆ ಮಾಡಿದ ಸಚಿವ

ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಆರೋಪಿಯ ಬಂಧನಕ್ಕೆ ಹೈದರಾಬಾದ್ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಆರೋಪಿ ಪಲಕೊಂಡ ರಾಜು ಬಂಧಿಸಲು ಸಹಾಯ ಮಾಡುವವರಿಗೆ...
ಆರೋಪಿ ರಾಜು
ಆರೋಪಿ ರಾಜು

ಹೈದರಾಬಾದ್: ಇತ್ತೀಚಿಗೆ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಆರೋಪಿಯ ಬಂಧನಕ್ಕೆ ಹೈದರಾಬಾದ್ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಆರೋಪಿ ಪಲಕೊಂಡ ರಾಜು ಬಂಧಿಸಲು ಸಹಾಯ ಮಾಡುವವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಈ ಮಧ್ಯೆ, ತೆಲಂಗಾಣ ಕಾರ್ಮಿಕ ಸಚಿವ ಚಿ ಮಲ್ಲಾರೆಡ್ಡಿ ಮಂಗಳವಾರ ಆರೋಪಿಯನ್ನು "ಎನ್ಕೌಂಟರ್" ಮಾಡಲಾಗುವುದು ಎಂದು ಹೇಳುವ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ. 

"ನಾವು ಅವನನ್ನು ಎನ್ಕೌಂಟರ್ ಮಾಡಿ ಸಾಯಿಸುತ್ತೇವೆ" ಎಂದು ಕಾರ್ಮಿಕ ಸಚಿವ ಹೇಳಿದ್ದಾರೆ.

ಸಂತ್ರಸ್ತ ಬಾಲಕಿಯ ಕುಟುಂಬವನ್ನು ಸರ್ಕಾರ ನೋಡಿಕೊಳ್ಳುತ್ತದೆ ಎಂದು ಮಲ್ಲಾರೆಡ್ಡಿ ಅವರು ಭರವಸೆ ನೀಡಿದ್ದಾರೆ.

ಹೈದರಾಬಾದ್ ಪೊಲೀಸರು, ಆರೋಪಿ ಚಿತ್ರವನ್ನು ಬಿಡುಗಡೆ ಮಾಡಿ, ಆತನ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಪೊಲೀಸರ "ಕಠಿಣ ಪ್ರಯತ್ನದ ಹೊರತಾಗಿಯೂ ಸೈದಾಬಾದ್ ನಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಪಾಲಕೊಂಡ ರಾಜು ಇನ್ನೂ ತಲೆಮರೆಸಿಕೊಂಡಿದ್ದಾನೆ. 

ಎಂಎಯುಡಿ ಐಟಿ ಸಚಿವ ಕೆಟಿ ರಾಮರಾವ್ ಅವರು ಭಾನುವಾರ "ಆರೋಪಿಯನ್ನು ಬಂಧಿಸಿದ್ದಕ್ಕಾಗಿ" ಪೊಲೀಸರನ್ನು ಅಭಿನಂದಿಸಿದ್ದರು. ಆದರೆ ಮಂಗಳವಾರ ತಮ್ಮ ತಪ್ಪಾದ ಮಾಹಿತಿಗೆ ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ದುಷ್ಕರ್ಮಿ ಪರಾರಿಯಾಗಿದ್ದಾನೆ ಮತ್ತು ಆತನ ಬಂಧನಕ್ಕಾಗಿ ಹೈದರಾಬಾದ್ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ಕೆಟಿ ರಾಮರಾವ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com