ಬೆಂಗಳೂರು ಶಾಸಕ ಎಸ್.ಆರ್.ವಿಶ್ವನಾಥ್, ಟಿಎ ಶರಣವಣ ಸೇರಿ, ಟಿಟಿಡಿಗೆ 52 ವಿಶೇಷ ಆಹ್ವಾನಿತರ ನೇಮಕ
ಮಹತ್ವದ ಬೆಳವಣಿಗೆಯಲ್ಲಿ ಆಂಧ್ರಪ್ರದೇಶ ಸರ್ಕಾರವು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಗೆ 52 ವಿಶೇಷ ಆಹ್ವಾನಿತರ ನೇಮಕ ಮಾಡಲಾಗಿದೆ.
Published: 16th September 2021 05:56 PM | Last Updated: 16th September 2021 05:57 PM | A+A A-

ಸಂಗ್ರಹ ಚಿತ್ರ
ಅಮರಾವತಿ: ಮಹತ್ವದ ಬೆಳವಣಿಗೆಯಲ್ಲಿ ಆಂಧ್ರಪ್ರದೇಶ ಸರ್ಕಾರವು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಗೆ 52 ವಿಶೇಷ ಆಹ್ವಾನಿತರ ನೇಮಕ ಮಾಡಲಾಗಿದೆ.
ಪ್ರಮುಖವಾಗಿ ಕರ್ನಾಟಕದಿಂದ ಬೆಂಗಳೂರಿನ ಶಾಸಕ ಎಸ್.ಆರ್.ವಿಶ್ವನಾಥ, ಜೆಡಿಎಸ್ ನಾಯಕ ಟಿಎ ಶರವಣ ಈ ಮಂಡಳಿಗೆ ಸೇರ್ಪಡೆಗೊಂಡಿದ್ದಾರೆ. ಇದಲ್ಲದೆ ಶಿವಸೇನಾ ಕಾರ್ಯದರ್ಶಿ ಮಿಲಿಂದ ಕೇಶವ ನರ್ವೇಕರ್, ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಸೇರಿದಂತೆ 52 ವಿಶೇಷ ಆಹ್ವಾನಿತರನ್ನು ನಾಮ ನಿರ್ದೇಶನ ಮಾಡಲಾಗಿದೆ.
Honoured and blessed to be appointed as the Member of (Tirumala Tirupati Devasthanams) TTD Board.#TTD #Bengaluru #SRVishwanath @ysjagan @BSYBJP @BSBommai @peddireddyysrcp @yvsubbareddymp pic.twitter.com/em3v0LXaTW
— S R Vishwanath (@SRVishwanathBJP) September 15, 2021
ಅಧ್ಯಕ್ಷರು, 24 ಸಾಮಾನ್ಯ ಸದಸ್ಯರು ಮತ್ತು ನಾಲ್ವರು ಪದನಿಮಿತ್ತ ಸದಸ್ಯರನ್ನು ಒಳಗೊಂಡಿರುವ ಮಂಡಳಿಯ ಒಟ್ಟಾರೆ ಸದಸ್ಯರ ಸಂಖ್ಯೆ ಇದೀಗ 81ಕ್ಕೆ ಏರಿದಂತಾಗಿದೆ.
ಮೂರು ಪ್ರತ್ಯೇಕ ಆದೇಶಗಳನ್ನು ಬುಧವಾರ ರಾತ್ರಿ ಹೊರಡಿಸುವ ಮೂಲಕ ಆಂಧ್ರ ಪ್ರದೇಶ ಸರ್ಕಾರ ಮಂಡಳಿ ಸದಸ್ಯರ ಸಂಖ್ಯೆಯನ್ನು ಭಾರಿ ಗಾತ್ರದಲ್ಲಿ ಹೆಚ್ಚಿಸಿದೆ. ಟಿಟಿಡಿಯ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಪರಿಸರದ ವಾತಾವರಣವನ್ನು ರಕ್ಷಿಸಲು ಹಾಗೂ ಭಕ್ತರು ಮತ್ತು ಭಕ್ತರ ಕಲ್ಯಾಣ ತತ್ವಗಳನ್ನು ಪಾಲಿಸಲು ಭಾರಿ ಗಾತ್ರದ ಮಂಡಳಿಯ ಅಗತ್ಯವಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಟಿಟಿಡಿ ಹೊಸ ಸಮಿತಿ ಪುನರ್ ರಚನೆ
1987ರ ಹಿಂದು ಧಾರ್ಮಿಕ ಸಂಸ್ಥೆ ಹಾಗೂ ಮುಜರಾಯಿ ಕಾಯ್ದೆ ಅನ್ವಯ ಟಿಟಿಡಿ ಚೇರ್ಮನ್ ಆಗಿ ಸುಬ್ಬಾರೆಡ್ಡಿ ಅವರನ್ನು ನೇಮಿಸಲಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ ವಾಣಿ ಮೋಹನ್ ಅವರು ಆದೇಶ ಹೊರಡಿಸಿದ್ದಾರೆ. ಶೀಘ್ರದಲ್ಲೇ ಟಿಟಿಡಿ ಹೊಸ ಸಮಿತಿಯನ್ನು ಪುನರ್ ರಚನೆ ಮಾಡಲಾಗಿದೆ. ತೆಲಂಗಾಣದಿಂದ ನಾಲ್ವರು, ತಮಿಳುನಾಡಿನಿಂದ ಮೂವರು, ಕರ್ನಾಟಕದಿಂದ ಇಬ್ಬರು, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದಿಂದ ತಲಾ ಒಬ್ಬರು ಸಮಿತಿಗೆ ಆಯ್ಕೆಯಾಗಿದ್ದಾರೆ. ಮಿಕ್ಕ ಸದಸ್ಯರೆಲ್ಲರೂ ಆಂಧ್ರಪ್ರದೇಶದವರಾಗಿದ್ದಾರೆ. ವೈಎಸ್ಸಾರ್ ಕಾಂಗ್ರೆಸ್ ಶಾಸಕರಾದ ಭೂಮನಾ ಕರುಣಾಕರ್ ರೆಡ್ಡಿ ಪದನಿಮಿತ್ತ ಸದಸ್ಯ ಹಾಗೂ ಚೆವಿರೆಡ್ಡಿ ಭಾಕರ್ ರೆಡ್ಡಿ ಎಕ್ಸ್ ಆಫಿಸಿಯೋ ಸದಸ್ಯರಾಗಿ ಮುಂದುವರೆಯಲಿದ್ದಾರೆ.