The New Indian Express
ನವದೆಹಲಿ: ಒಂದೇ ದಿನದಲ್ಲಿ ಅತಿ ಹೆಚ್ಚು ಮಂದಿಗೆ ಲಸಿಕೆ ನೀಡಿದ ದಾಖಲೆ ಮಾಡಲ್ಪಟ್ಟ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಲಸಿಕಾ ದಾಖಲೆ ವಿರುದ್ಧ ಮಾತನಾಡುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಸಾರ್ವಕಾಲಿಕ ದಾಖಲೆ: ಒಂದೇ ದಿನ 2.50 ಕೋಟಿ ಮಂದಿಗೆ ಕೋವಿಡ್ ಲಸಿಕೆ!
ಸೆ.17 ಶುಕ್ರವಾರದಂದು ದೇಶದಲ್ಲೇ ಪ್ರಥಮಬಾರಿಗೆ ಒಂದೇ ದಿನ 2.5 ಕೋಟಿ ಮಂದಿಗೆ ಲಸಿಕೆ ನೀಡಿದ ದಾಖಲೆ ಸೃಷ್ಟಿಯಾಗಿತ್ತು. ಅದೇ ದಿನ ಮೋದಿಯವರ ಜನ್ಮದಿನ.
ಹೀಗಾಗಿ ರಾಜಕೀಯ ಪಕ್ಷಗಳು, ದಾಖಲೆ ಪ್ರಮಾಣದ ಲಸಿಕೆ ನೀಡಲು ಮೋದಿಯವರ ಜನ್ಮದಿನದ ತನಕ ಏಕೆ ಕಾಯಬೇಕು ಎಂದು ಟೀಕೆ ಮಾಡಿದ್ದವು.
ರಾಜಕೀಯ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿರುವ ಮೋದಿ ಯಾವುದೇ ಪಕ್ಷದ ಹೆಸರನ್ನು ಹೇಳದೆಯೇ, ದೇಶದಲ್ಲಿ 2.5 ಕೋಟಿ ಲಸಿಕೆ ಹಂಚಿಕೆ ಮಾಡಿದರೆ ಪಕ್ಷಗಳಿಗೆ ಏಕೆ ಜ್ವರ ಎಂದು ಕಿಡಿ ಕಾರಿದ್ದಾರೆ.
ಮೋದಿ ಪ್ರತಿಕ್ರಿಯೆಗೂ ಮುನ್ನ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಈ ಬಗ್ಗೆ ಟ್ವೀಟ್ ಮಾಡಿದ್ದರು. ಅವರ ಟ್ವೀಟ್ ಪ್ರಕಟಗೊಂಡ ಕೆಲವೇ ಸಮಯದಲ್ಲಿ ಮೋದಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ‘ಕುದುರೆಯನ್ನು ನೀರಿನ ಬಳಿ ಕರೆದುಕೊಂಡು ಹೋಗಬಹುದು, ನೀರು ಕುಡಿಯುವಂತೆ ಮಾಡುವುದು ಹೇಗೆ?’: ಮೋದಿಗೆ ಸ್ವಾಮಿ ಠಕ್ಕರ್!
ತಮ್ಮ ಟ್ವೀಟ್ ನಲ್ಲಿ ಚಿದಂಬರಂ ಅವರು 'ಲಸಿಕೆ ಹಂಚಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಹೋಗಬೇಕು. ಪ್ರಧಾನಿಯವರ ಜನ್ಮದಿನದಂದು ಮಾತ್ರವೇ ಏಕೆ ಏರಿಕೆ ಕಾಣಬೇಕು' ಎಂದು ಅವರು ಪ್ರಶ್ನಿಸಿದ್ದರು.