ಏರ್ಲೈನ್ಸ್ ಗಳ ದೇಶೀಯ ಕಾರ್ಯಾಚರಣೆಯ ಮಿತಿಯನ್ನು ಏರಿಸಿದ ವಿಮಾನಯಾನ ಸಚಿವಾಲಯ

ವಿಮಾನಯಾನ ಸಂಸ್ಥೆಗಳು ದೇಶೀಯ ಪ್ರಯಾಣಿಕ ವಿಮಾನಗಳ ಕಾರ್ಯಾಚರಣೆಯ ಮಿತಿಯನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ. 
ದೇಶಿ ವಿಮಾನಗಳ ಹಾರಾಟ
ದೇಶಿ ವಿಮಾನಗಳ ಹಾರಾಟ

ನವದೆಹಲಿ: ವಿಮಾನಯಾನ ಸಂಸ್ಥೆಗಳು ದೇಶೀಯ ಪ್ರಯಾಣಿಕ ವಿಮಾನಗಳ ಕಾರ್ಯಾಚರಣೆಯ ಮಿತಿಯನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ. 

ಕೋವಿಡ್-19 ಸಾಂಕ್ರಾಮಿಕ ಎದುರಾಗುವುದಕ್ಕೂ ಮುನ್ನ ಇದ್ದ ದೇಶೀಯ ವಿಮಾನಗಳ ಸಂಚಾರದ ಪೈಕಿ ಶೇ.85 ರಷ್ಟನ್ನು ಕಾರ್ಯಾಚರಣೆಗೆ ಬಳಸಬಹುದೆಂದು ಪ್ರಯಾಣಿಕ ವಿಮಾನಯಾನ ಸಚಿವಾಲಯ ಹೇಳಿದೆ. ಈ ವರೆಗೂ ಶೇ.72.5 ರಷ್ಟು ಮಿತಿಯನ್ನು ವಿಧಿಸಲಾಗಿತ್ತು.

ಆ.12 ರಿಂದ ಕೋವಿಡ್ ಗೂ ಮುನ್ನ ಇದ್ದ ದೇಶೀಯ ವಿಮಾನಗಳ ಶೇ.72.5 ರಷ್ಟನ್ನು ಮಾತ್ರ ವಿಮಾನಯಾನ ಸಂಸ್ಥೆಗಳು ಬಳಕೆ ಮಾಡುತ್ತಿದ್ದವು ಎಂದು ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಜು.5 ಹಾಗೂ ಆ.12 ರ ಅವಧಿಯಲ್ಲಿ ಈ ಮಿತಿ ಶೇ.65 ರಷ್ಟಿತ್ತು. ಇದಕ್ಕೂ ಮುನ್ನ ಜೂ.1 ರಿಂದ ಜು.5 ವರೆಗೆ ಮಿತಿಯನ್ನು ಶೇ.50 ಕ್ಕೆ ಇಳಿಕೆ ಮಾಡಲಾಗಿತ್ತು. ಶನಿವಾರ ಹೊರಡಿಸಿರುವ ಆದೇಶದಲ್ಲಿ ಶೇ.72.5 ರಷ್ಟು ಮಿತಿ ಮುಂದಿನ ಆದೇಶದವರೆಗೂ ಇರಲಿದೆ ಎಂದು ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com