ಅಮರೀಂದರ್ ಸಿಂಗ್ ಪಕ್ಷದ ಹಿತಾಸಕ್ತಿಗಳಿಗೆ ನೋವುಂಟು ಮಾಡುವುದಿಲ್ಲ ಎಂಬ ವಿಶ್ವಾಸವಿದೆ: ಅಶೋಕ್ ಗೆಹ್ಲೋಟ್
ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ಹಿತಾಸಕ್ತಿಗಳಿಗೆ ನೋವುಂಟು ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹೇಳಿದ್ದಾರೆ.
Published: 19th September 2021 01:38 PM | Last Updated: 19th September 2021 01:38 PM | A+A A-

ಅಶೋಕ್ ಗೆಹ್ಲೋಟ್
ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ಹಿತಾಸಕ್ತಿಗಳಿಗೆ ನೋವುಂಟು ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ಟ್ವೀಟ್ ಮಾಡಿರುವ ಅವರು, ಸೇನೆಯ ಮಾಜಿ ಕ್ಯಾಪ್ಟನ್, ಪಕ್ಷದ ಗೌರವಾನ್ವಿತ ಮುಖಂಡರು, ಮುಂದೆಯೂ ಕಾಂಗ್ರೆಸ್ ಪಕ್ಷದ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಮುಂದುವರಿಯುವ ಭರವಸೆ ಇದೆ ಎಂದು ಹೇಳಿದ್ದಾರೆ.
ಕ್ಯಾಪ್ಟನ್ ಸಾಹೇಬರೇ ಸ್ವತಃ ಹೇಳಿರುವಂತೆ, ಅವರಿಗೆ ಪಕ್ಷವು ಒಂಬತ್ತೂವರೆ ವರ್ಷಗಳು ಪ್ರಮುಖ ಹೊಣೆಗಾರಿಕೆಯನ್ನು ನೀಡಿದೆ ಹಾಗೂ ಪಂಜಾಬ್‌ನ ಜನತೆಗೆ ಸೇವೆ ಸಲ್ಲಿಸುವ ಕರ್ತವ್ಯವನ್ನು ಅವರು ಅತ್ಯಂತ ಪ್ರಾಮಾಣಿಕವಾಗಿ ಪೂರೈಸಿದ್ದಾರೆಂದು ತಿಳಿಸಿದ್ದಾರೆ.
ಪಕ್ಷದ ಹೈಕಮಾಂಡ್ ಕೇವಲ ಶಾಸಕರು ಮತ್ತು ಸಾರ್ವಜನಿಕರ ಪ್ರತಿಕ್ರಿಯೆಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಹಾಗೂ ನಾಯಕರು ಪಕ್ಷದ ಹಿತದೃಷ್ಟಿಯಿಂದ ಯೋಚಿಸಬೇಕು ಎಂದಿದ್ದಾರೆ.
ಪಂಜಾಬ್ ಕಾಂಗ್ರೆಸ್‌ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಶನಿವಾರ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನೂತನ ಮುಖ್ಯಮಂತ್ರಿಯ ಆಯ್ಕೆ ಈಗ ಸೋನಿಯಾ ಗಾಂಧಿ ಅವರ ಅಂಗಳದಲ್ಲಿದೆ.