ಪಂಜಾಬ್ ಗೆ ಇಬ್ಬರು ಉಪ ಮುಖ್ಯಮಂತ್ರಿಗಳು: ಹರೀಶ್ ರಾವತ್

 ಪಂಜಾಬ್ ನಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳು ಇರಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಹೇಳಿದ್ದಾರೆ. 
ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಅವರೊಂದಿಗೆ ನೂತನ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಛನಿ ಮತ್ತಿತರರು
ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಅವರೊಂದಿಗೆ ನೂತನ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಛನಿ ಮತ್ತಿತರರು

ಚಂಡೀಘಡ: ಪಂಜಾಬ್ ನಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳು ಇರಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಹೇಳಿದ್ದಾರೆ. 

ಪಂಜಾಬ್ ಸರ್ಕಾರದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳು ಇರಲಿದ್ದಾರೆ. ಸಿಖ್ ಸಮುದಾಯ ಪ್ರಾಬಲ್ಯದ ರಾಜ್ಯದಲ್ಲಿ ಒಬ್ಬರು ಜಾಟ್ ಸಿಖ್ ಸಮುದಾಯದಿಂದ ಉಪ ಮುಖ್ಯಮಂತ್ರಿಯಾದರೆ ಮತ್ತೊಬ್ಬರು ಹಿಂದು ಸಮುದಾಯದಿಂದ ಉಪ ಮುಖ್ಯ ಮಂತ್ರಿಯಾಗಲಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆಗೆ ಹರೀಶ್ ರಾವತ್ ತಿಳಿಸಿದ್ದಾರೆ.

ಜಾಟ್ ಸಿಖ್ ಸಮುದಾಯದಿಂದ ಶಾಸಕ  ದೇರಾ ಬಾಬಾ ನಾನಕ್ ಸುಖಜಿಂದರ್ ಸಿಂಗ್ ರಾಂಧವಾ ಅವರ ಹೆಸರನ್ನು ಪರಿಗಣಿಸಲಾಗಿದ್ದು, ಹಿಂದೂ ಸಮುದಾಯದ ಸಂಭಾವ್ಯರಲ್ಲಿ ಬ್ರಹ್ಮ ಸಿಂಗ್ ಮೊಹಿಂದ್ರಾ (ಪಟಿಯಾಲ ಗ್ರಾಮೀಣ ಶಾಸಕ), ವಿಜಯ್ ಇಂದರ್ ಸಿಂಗ್ಲಾ (ಸಂಗ್ರೂರ್ ಶಾಸಕರು) ಮತ್ತು ಭರತ್ ಭೂಷಣ್ ಅಶು (ಪಂಜಾಬ್ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಮಂತ್ರಿ) ಅವರು ಹೆಸರುಗಳು ಕೇಳಿಬರುತ್ತಿದೆ.

ಉಪಮುಖ್ಯಮಂತ್ರಿಯ ಎರಡನೇ ಹೆಸರನ್ನು ಅಂತಿಮಗೊಳಿಸಿದರೆ ಚನ್ನಿ ಜೊತೆಗೆ ಇಬ್ಬರು ಉಪಮುಖ್ಯಮಂತ್ರಿಗಳು ಸೋಮವಾರ ಪ್ರಮಾಣವಚನ ಸ್ವೀಕರಿಸುತ್ತಾರೆ. ಒಂದು ವೇಳೆ, ಉಪಮುಖ್ಯಮಂತ್ರಿಗಳ ನಿರ್ಧಾರ ವಿಳಂಬವಾದರೆ ನಂತರ ಅವರಿಗೆ ಪ್ರಮಾಣವಚನ ಬೋಧಿಸಲಾಗುತ್ತದೆ. ಚರಣ್ ಜಿತ್ ಸಿಂಗ್ ಛನಿ ಇಂದು 11 ಗಂಟೆಗೆ ಪಂಜಾಬಿನ 16ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com