The New Indian Express
ಪಾಲಕ್ಕಾಡ್: 16 ಆನೆಗಳನ್ನೊಳಗೊಂಡ ಹಿಂಡೊಂದು ಪಾಲಕ್ಕಾಡ್ ನ ಕಾಂಜಿಕೋಡ್ ಎಂಬಲ್ಲಿ ಸಿಲುಕಿಕೊಂಡಿತ್ತು. ಅಲ್ಲಿನ ಐಐಟಿ ಕ್ಯಾಂಪಸ್ ನಲ್ಲಿ ಜಮಾಯಿಸಿದ್ದ ಆನೆಗಳನ್ನು ನೋಡಲು ನೂರಾರು ಮಂದಿ ನೆರೆದರು.
ಹತ್ತಿರದ ವಲಯರ್ ಕಾಡಿನಿಂದ ತಪ್ಪಿಸಿಕೊಂಡು ಬಂದಿದ್ದ ಆನೆಗಳು ಕಾಂಜಿಕೋಡ್ ನ ಜನವಸತಿ ಪ್ರದೇಶದೊಳಕ್ಕೆ ನುಗ್ಗಿದ್ದವು. ಆನೆಗಳನ್ನು ಮತ್ತೆ ಕಾಡಿಗೆ ಅಟ್ಟಲು ಸ್ಥಳೀಯರು ನಾನಾ ಕಸರತ್ತು ನಡೆಸಿದರು. ಕಿರುಚುವುದು, ಪಟಾಕಿ ಹೊಡೆಯುವುದು ಸೇರಿದಂತೆ ಹಲವು ಪ್ರಯತ್ನಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: ಕಾಲುವೆಯಲ್ಲಿ ಮುಳುಗಿಹೋಗುತ್ತಿದ್ದ 8 ತಿಂಗಳ ಮರಿಯಾನೆ ಕಣ್ಣನ್ ಈಗ ಪ್ರವಾಸಿಗರ ಕಣ್ಮಣಿ
ಸ್ಥಳೀಯರ ಪ್ರಯತ್ನದಿಂದ ಆನೆಗಳು ಇನ್ನಷ್ಟು ಹೆದರಿ, ಗೊಂದಲಗೊಂಡು ದಿಕ್ಕಾಪಾಲಾಗಿ ಓಡಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಭರದಲ್ಲಿ ಹತ್ತಿರದಲ್ಲಿ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಆನೆಗಳು ನುಗ್ಗಿದವು. ಅಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಜೀವ ಭಯದಿಂದ ಮರ ಏರಿ ಕುಳಿತ ಘಟನೆಯೂ ನಡೆಯಿತು.
ಕಾಂಜಿಕೋಡ್ ಅನಾದಿ ಕಾಲದಿಂದಲೂ ಅನೆಗಳು ಸಾಗುತ್ತಿದ್ದ ಕಾಡು ಪ್ರದೇಶವಾಗಿತ್ತು. ಇದೀಗ ಮನುಷ್ಯರ ವಾಸದಿಂಡಾಗಿ ಆನೆಗಳ ಸಂಚಾರಕ್ಕೆ ತೊಂದರೆಯುಂಟಾಗಿದೆ ಎಂದು ಪರಿಸರಪ್ರೇಮಿಗಳು ಹೇಳಿದ್ದಾರೆ.