ನನ್ನ ಭಾಷೆಯನ್ನು ಸುಧಾರಿಸಿಕೊಳ್ಳುತ್ತೇನೆ: 'ಚಪ್ಪಲಿ' ಹೇಳಿಕೆ ನಂತರ ಉಮಾ ಭಾರತಿ ವಿಷಾದ

ಹಿರಿಯ ಬಿಜೆಪಿ ನಾಯಕಿ ಉಮಾಭಾರತಿ ಅವರು ಕಾಂಗ್ರೆಸ್ ಹಿರಿಯ ದಿಗ್ವಿಜಯ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ, ಅವರು ತಮ್ಮ ಭಾಷೆಯನ್ನು ಸುಧಾರಿಸುವುದಾಗಿ ತಿಳಿಸಿದ್ದಾರೆ.
ಉಮಾಭಾರತಿ
ಉಮಾಭಾರತಿ

ಭೂಪಾಲ್: ಸರ್ಕಾರಿ ಅಧಿಕಾರಿಗಳು ಇರುವುದು ನಮ್ಮ ಚಪ್ಪಲಿಗಳನ್ನು ತೆಗೆದುಕೊಳ್ಳಲು ಎಂಬ  ವಿವಾದಾತ್ಮಕ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ನಂತರ, ಹಿರಿಯ ಬಿಜೆಪಿ ನಾಯಕಿ ಉಮಾಭಾರತಿ ಅವರು ಕಾಂಗ್ರೆಸ್ ಹಿರಿಯ ದಿಗ್ವಿಜಯ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ, ಅವರು ತಮ್ಮ ಭಾಷೆಯನ್ನು ಸುಧಾರಿಸುವುದಾಗಿ ತಿಳಿಸಿದ್ದಾರೆ.

ವೈರಲ್‌ ಆಗಿರುವ ವಿಡಿಯೋದಲ್ಲಿ 'ನಿಮಗೆ ಗೊತ್ತಾ..? ಅಧಿಕಾರಿ ವರ್ಗ ಎಂದರೇನು? ಅಧಿಕಾರಿಗಳು ಇರುವುದೇ ನಮ್ಮ ಚಪ್ಪಲಿ ಎತ್ತಲು. ಅವರು ನಮ್ಮ ಚಪ್ಪಲಿ ಎತ್ತುತ್ತಾರೆ. ಹೀಗಾಗಿ ಮಾತ್ರ ನಾವು ಅವರೊಂದಿಗೆ ರಾಜಿಯಾಗುತ್ತೇವೆ' ಎಂದು ಉಮಾ ಭಾರತಿ ಮಾತನಾಡಿರುವುದು ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಉಮಾ ಭಾರತಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ  ಉಮಾ ಭಾರತಿ ಕ್ಷಮೆ ಕೋರಿದ್ದಾರೆ. ನನ್ನ ಮಾತಿನಿಂದ ನನಗೆ ತುಂಬಾ ನೋವಾಗಿದೆ. ನಾನು ನಿಮಗೆ ಪದೇ ಪದೇ ಹೇಳುತ್ತಿದ್ದೆ, ನೀವು ಮಿತವಾಗಿ ಭಾಷೆ ಬಳಸುವುದಿಲ್ಲ ಎಂದು. ಆದರೆ ನಾನು ಈಗಿನಿಂದಲೇ ನನ್ನ ಭಾಷೆಯನ್ನು ಸುಧಾರಿಸುತ್ತೇನೆ, ನೀವು ಅದೇ ರೀತಿ ಮಾಡಲು ಸಾಧ್ಯವಾದರೆ, ಅದನ್ನು ಮಾಡಿ ಎಂದು ಹೇಳಿದ್ದಾರೆ.

ಅವರು ಕಾಂಗ್ರೆಸ್ ನಾಯಕನಿಗೆ ಬರೆದ ಪತ್ರದಲ್ಲಿ 'ರಾಮಾಯಣ' ಮಹಾಕಾವ್ಯದ 'ಚೌಪಾಯಿ' (ಪದ್ಯ) ವನ್ನು ಉಲ್ಲೇಖಿಸಿದ್ದಾರೆ. 'ನಾಯಕರನ್ನು ಅಧಿಕಾರಿಗಳು ನಿಯಂತ್ರಿಸುತ್ತಾರೆ ಎಂದು ನೀವು ಭಾವಿಸಿದ್ದೀರಾ. ಇಲ್ಲ ಹಾಗಲ್ಲ. ಮೊದಲು ಅಧಿಕಾರಿಗಳು ನಮ್ಮ ಬಳಿ ಖಾಸಗಿಯಾಗಿ ಮಾತುಕತೆ ನಡೆಸುತ್ತಾರೆ. ಬಳಿಕ ಅಧಿಕಾರಿಗಳು ಕಡತ ತಯಾರಿಸಿ ಮುಂದಕ್ಕೆ ಕಳಿಸುತ್ತಾರೆ. ಅಧಿಕಾರಿಗಳು ಇರುವುದು ನಮ್ಮ ಚಪ್ಪಲಿ ಎತ್ತಲು ಎಂದು ಹೇಳಿಕೆ ನೀಡಿದ್ದಕ್ಕೆ ವಿಷಾದ ವ್ಯಕ್ತ ಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com