ದೆಹಲಿಯ ರೋಹಿಣಿ ಕೋರ್ಟ್ ನಲ್ಲಿ ಶೂಟೌಟ್: ಗ್ಯಾಂಗ್ ಸ್ಟರ್ ಜಿತೇಂದರ್ ಮನ್ 'ಗೋಗಿ' ಸೇರಿ ನಾಲ್ವರ ಸಾವು

ರಾಜಧಾನಿ ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಗುಂಡಿನ ದಾಳಿ ನಡೆದಿದ್ದು, ಗ್ಯಾಂಗ್ ಸ್ಟರ್ ಜಿತೇಂದರ್ ಮನ್ 'ಗೋಗಿ' ಸೇರಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ.
ಶೂಟೌಟ್ ನಂತರದ ದೃಶ್ಯ
ಶೂಟೌಟ್ ನಂತರದ ದೃಶ್ಯ

ನವದೆಹಲಿ: ರಾಜಧಾನಿ ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಗುಂಡಿನ ದಾಳಿ ನಡೆದಿದ್ದು, ಗ್ಯಾಂಗ್ ಸ್ಟರ್ ಜಿತೇಂದರ್ ಮನ್ 'ಗೋಗಿ' ಸೇರಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ.

ವಕೀಲರ ಉಡುಪಿನಲ್ಲಿದ್ದ ಮೂವರು ದಾಳಿಕೋರರನ್ನು ರೋಹಿಣಿ ನ್ಯಾಯಾಲಯದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ದೆಹಲಿ ಪೊಲೀಸ್ ವಿಶೇಷ ಕೋಶ ತಿಳಿಸಿದೆ.

ಜಿತೇಂದರ್ ಮನ್ 'ಗೋಗಿ' ಎಂಬ ಗ್ಯಾಂಗ್ ಸ್ಟರ್ ನ್ನು ದೆಹಲಿಯ ರೋಹಿಣಿ ಕೋರ್ಟ್ ಗೆ ಇಂದು ಪೊಲೀಸರು ವಿಚಾರಣೆಗೆ ಕರೆತರುವ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಫೈರಿಂಗ್ ನಲ್ಲಿ ಗ್ಯಾಂಗ್ ಸ್ಟರ್ ಗೋಗಿ ಮೃತಪಟ್ಟಿದ್ದಾನೆ, ಅದಕ್ಕೆ ಪ್ರತಿಯಾಗಿ ಪೊಲೀಸರು ನಡೆಸಿದ ದಾಳಿಯಲ್ಲಿ ಮೂವರು ದಾಳಿಕೋರರು ಸಹ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಗ್ಯಾಂಗ್ ಸ್ಟರ್ ಜಿತೇಂದರ್ ಮನ್ನ್ ನನ್ನು ಕೋರ್ಟ್ ಆವರಣದಲ್ಲಿಯೇ ದಾಳಿಕೋರರು ಶೂಟೌಟ್ ನಲ್ಲಿ ಕೊಂದು ಹಾಕಿದ್ದಾರೆ ಎಂದು ಬಾರ್ ಅಂಡ್ ಬೆಂಚ್ ದೃಢಪಡಿಸಿದೆ. ಇಂದಿನ ಈ ದಾಳಿ ಘಟನೆ ರಾಜಧಾನಿ ದೆಹಲಿಯ ಕೋರ್ಟ್ ಗಳ ಆವರಣದಲ್ಲಿ ಭದ್ರತೆಯ ಬಗ್ಗೆ ಜನರಲ್ಲಿ ಆತಂಕ ಮತ್ತು ಪ್ರಶ್ನೆ ಹುಟ್ಟುವಂತೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com