ದೇಶಕ್ಕೆ ಕನಿಷ್ಠ 600 ವೈದ್ಯಕೀಯ ಕಾಲೇಜು, ಏಮ್ಸ್ ತರಹದ 50 ಸಂಸ್ಥೆಗಳು ಬೇಕು: ನಿತಿನ್ ಗಡ್ಕರಿ

ದೇಶಕ್ಕೆ ಕನಿಷ್ಠ 600 ವೈದ್ಯಕೀಯ ಕಾಲೇಜುಗಳು ದೆಹಲಿಯ ಏಮ್ಸ್ ತರಹದ 50 ಸಂಸ್ಥೆಗಳು ಮತ್ತು 200 ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳು ಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ ಹೇಳಿದ್ದಾರೆ.
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ಪುಣೆ: ದೇಶಕ್ಕೆ ಕನಿಷ್ಠ 600 ವೈದ್ಯಕೀಯ ಕಾಲೇಜುಗಳು ದೆಹಲಿಯ ಏಮ್ಸ್ ತರಹದ 50 ಸಂಸ್ಥೆಗಳು ಮತ್ತು 200 ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳು ಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ ಹೇಳಿದ್ದಾರೆ.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಡ್ ನಗರದಲ್ಲಿ ಕೊರೋನಾ ವಾರಿಯರ್ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ವಲಯದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅಗತ್ಯ ಇದೆ ಎಂದು ಹೇಳಿದರು.

ಸಹಕಾರಿ ಕ್ಷೇತ್ರ ಸಹ ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸಲು ಮುಂದೆ ಬರಬೇಕು ಎಂದು ಅವರು ಹೇಳಿದ್ದಾರೆ.

ಒಮ್ಮೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಚರ್ಚೆಯ ಸಮಯದಲ್ಲಿ, ನಾನು ಅವರಿಗೆ ವೆಂಟಿಲೇಟರ್‌ಗಳ ಕೊರತೆಯ ಬಗ್ಗೆ ಹೇಳಿದೆ. ದೇಶದಲ್ಲಿ ಎಷ್ಟು ವೆಂಟಿಲೇಟರ್‌ಗಳಿವೆ ಎಂದು ಅವರು ನನ್ನನ್ನು ಕೇಳಿದರು, ಅದಕ್ಕೆ ನಾನು ಸುಮಾರು 2.5 ಲಕ್ಷ ಇರಬೇಕು ಎಂದು ಉತ್ತರಿಸಿದೆ. ಆದರೆ ದೇಶದಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗ ದೇಶದಲ್ಲಿ ಕೇವಲ 13,000 ವೆಂಟಿಲೇಟರ್‌ಗಳು ಇದ್ದವು ಎಂದು ಅವರು ನನಗೆ ತಿಳಿಸಿದರು ಎಂದು ಗಡ್ಕರಿ ಹೇಳಿದ್ದಾರೆ.

ಆ ಸಮಯದಲ್ಲಿ ಆಮ್ಲಜನಕ, ಬೆಡ್ ಗಳು ಮತ್ತು ಇತರ ವೈದ್ಯಕೀಯ ಸೌಲಭ್ಯಗಳ ಕೊರತೆ ಇತ್ತು. ಆದರೆ ವೈದ್ಯರು, ಅರೆವೈದ್ಯರು, ನರ್ಸ್ ಗಳು ಆ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದರು. "ಅವರ ಕೆಲಸವನ್ನು ನಾನು ಪ್ರಶಂಸಿಸುತ್ತೇನೆ" ಎಂದು ಗಡ್ಕರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com