ವಿಷ ಹರಡುತ್ತಿರುವ ದೇಶದಲ್ಲಿ ಅಮೃತಮಹೋತ್ಸವ?: ಅಸ್ಸಾಂ ಪೊಲೀಸರ ತೆರವು ಕಾರ್ಯಚರಣೆ ವಿರುದ್ಧ ರಾಹುಲ್ ಕಿಡಿ

ಅಸ್ಸಾಂ ಸರ್ಕಾರವು ದರ್ರಾಂಗ್ ಜಿಲ್ಲೆಯ ಧೋಲ್ಪುರ್ ನಲ್ಲಿ ಆರಂಭಿಸಿರುವ ತೆರವು ಕಾರ್ಯಾಚರಣೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಖಂಡಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಅಸ್ಸಾಂ ಸರ್ಕಾರವು ದರ್ರಾಂಗ್ ಜಿಲ್ಲೆಯ ಧೋಲ್ಪುರ್ ನಲ್ಲಿ ಆರಂಭಿಸಿರುವ ತೆರವು ಕಾರ್ಯಾಚರಣೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಖಂಡಿಸಿದ್ದಾರೆ.

ಅಸ್ಸಾಂ ಸರ್ಕಾರದ ಈ ಹೊರಹಾಕುವ ಕಾರ್ಯಾಚರಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ದ್ವೇಷದ ವಿಷವು ದೇಶದಲ್ಲಿ ಹರಡುತ್ತಿರುವಾಗ, ಯಾವ ರೀತಿಯ ಅಮೃತ್ ಮಹೋತ್ಸವ?” ಸ್ವಾತಂತ್ರ್ಯ ಎಂದರೇನು” ಎಂದು ಪ್ರಶ್ನಿಸಿದ್ದಾರೆ.

ಅಸ್ಸಾಂನ ದರಾಂಗ್ ಜಿಲ್ಲೆಯಲ್ಲಿ ಒತ್ತುವರಿ ತೆರವುಗೊಳಿಸುವ ವೇಳೆ ಪೊಲೀಸರು ಸ್ಥಳೀಯರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಬಂದೂಕು, ಲಾಠಿಗಳಿಂದ ಸಜ್ಜಿತರಾಗಿದ್ದ ಪೊಲೀಸರು ಜನರನ್ನು ಅಟ್ಟಿಸಿಕೊಂಡು ಹೋಗಿ ಥಳಿಸುವುದು ಕ್ಯಾಮೆರಾದಲ್ಲಿ ಸೆರೆ​ ಆಗಿದೆ. ಈ ಕುರಿತ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. 

ಧೋಲ್​ಪುರದಲ್ಲಿ ಸುಮಾರು 800 ಕುಟುಂಬಗಳನ್ನು ಸೋಮವಾರ ಅಸ್ಸಾಂ ಸರ್ಕಾರ ತೆರವುಗೊಳಿಸಿತ್ತು. ಕೃಷಿ ಯೋಜನೆಗಾಗಿ 4,500 ಬಿಘಾದಷ್ಟು ಜಮೀನನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಸ್ಥಳೀಯರು ಕಲ್ಲುತೂರಾಟ ನಡೆಸಿದ್ದರಿಂದ ಅನಿವಾರ್ಯವಾಗಿ ಬಲಪ್ರಯೋಗ ಮಾಡಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com