ಕೋವಿಡ್ ಲಸಿಕೆಯ ಸುರಕ್ಷತಾ ವಲಯದಿಂದ ಯಾರೂ ಹೊರಗುಳಿಯದಂತೆ ನೋಡಿಕೊಳ್ಳಿ: ಮನ್ ಕಿ ಬಾತ್ ಭಾಷಣದಲ್ಲಿ ಪ್ರಧಾನಿ ಮೋದಿ ಕರೆ

ಕೋವಿಡ್ ಶಿಷ್ಠಾಚಾರಗಳನ್ನು ಪಾಲಿಸಿ ಲಸಿಕೆಯ 'ಸುರಕ್ಷತಾ ವಲಯ'ದಿಂದ ನಾಗರಿಕರು ಯಾರು ಕೂಡ ಬಿಟ್ಟುಹೋಗದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)

ನವದೆಹಲಿ: ಕೋವಿಡ್ ಶಿಷ್ಠಾಚಾರಗಳನ್ನು ಪಾಲಿಸಿ ಲಸಿಕೆಯ 'ಸುರಕ್ಷತಾ ವಲಯ'ದಿಂದ ನಾಗರಿಕರು ಯಾರು ಕೂಡ ಬಿಟ್ಟುಹೋಗದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಮುಂದಿನ ತಿಂಗಳಿನಿಂದ ಸಾಲು ಸಾಲು ಹಬ್ಬಗಳು ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ಸಾಂಪ್ರದಾಯಿಕವಾಗಿ ಹಬ್ಬಗಳನ್ನು ಆಚರಿಸುವಂತೆ ಅವರು ದೇಶವಾಸಿಗಳಿಗೆ ತಮ್ಮ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ದಸರಾ ಹಬ್ಬ ಆರಂಭವಾಗುತ್ತದೆ, ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ದುಷ್ಠಶಕ್ತಿಗಳ ವಿರುದ್ಧ ಗೆದ್ದ ವಿಜಯದ ಸಂಕೇತವನ್ನು ಆಚರಿಸುತ್ತಿದ್ದು, ದುರ್ಗೆಯನ್ನು ಭಜಿಸುವ ಹೊತ್ತಿನಲ್ಲಿ ಕೋವಿಡ್ ಸೋಂಕಿನ ವಿರುದ್ಧ ಕೂಡ ಹೋರಾಡಬೇಕೆಂದು ನೆನಪು ಇಟ್ಟುಕೊಳ್ಳಬೇಕು ಎಂದರು.

ಆಕಾಶವಾಣಿಯ ಜನಪ್ರಿಯ ತಿಂಗಳ ಕೊನೆಯ ಭಾನುವಾರದ ಮನ್ ಕಿ ಬಾತ್ 81ನೇ ಸರಣಿಯಲ್ಲಿ ಮಾತನಾಡಿರುವ ಅವರು, ಟೀಮ್ ಇಂಡಿಯಾ ಈ ನಿಟ್ಟಿನಲ್ಲಿ ಪ್ರತಿದಿನ ಹಲವು ಸಾಧನೆಗಳನ್ನು ಮಾಡುತ್ತಿದೆ. ಲಸಿಕೆ ಅಭಿಯಾನದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದು ಇಂದು ಭಾರತದ ಲಸಿಕೆ ಅಭಿಯಾನದ ಬಗ್ಗೆ ಇಡೀ ವಿಶ್ವವೇ ಮಾತನಾಡುತ್ತಿದೆ ಎಂದು ಹೇಳಿ ಸಂತೋಷಪಟ್ಟರು.
ಕೇವಲ ನಾವು ಮಾತ್ರ ಕೊರೋನಾ ಲಸಿಕೆ ಪಡೆಯುವುದಲ್ಲದೆ ನಮ್ಮ ಸುತ್ತಮುತ್ತಲಿನವರೂ ಲಸಿಕೆ ತೆಗೆದುಕೊಂಡು ಸುರಕ್ಷತಾ ವಲಯವನ್ನು ನಿರ್ಮಿಸುವ ಕರ್ತವ್ಯವೂ ಇದೆ ಎಂದರು.

ಲಸಿಕೆಯ ಎರಡು ಡೋಸ್ ಪಡೆದ ನಂತರವೂ ಕೂಡ ಕೋವಿಡ್ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು.ಕೋವಿಡ್ ಸಾಂಕ್ರಾಮಿಕ ವಿರುದ್ಧ ಟೀಮ್ ಇಂಡಿಯಾ ದೇಶದ ಬಾವುಟ ಎತ್ತರಕ್ಕೆ ಹಾರುವಂತೆ ನೋಡಿಕೊಳ್ಳುತ್ತದೆ ಎಂದರು.

ವಿಶ್ವ ನದಿ ದಿನ: ಸೆಪ್ಟೆಂಬರ್ ತಿಂಗಳು ಅತ್ಯಂತ ಮುಖ್ಯ ಮಾಸ, ಈ ಮಾಸದಲ್ಲಿ ನಾವು ವಿಶ್ವ ನದಿ ದಿನವನ್ನು ಆಚರಿಸುತ್ತೇವೆ. ನಿಸ್ವಾರ್ಥವಾಗಿ ನಮಗೆ ನೀರು ಒದಗಿಸುವ ನದಿಗಳ ಕೊಡುಗೆಯನ್ನು ಸ್ಮರಿಸುವ ದಿನ. ಸೆಪ್ಟೆಂಬರ್ 26ನ್ನು ನಾವು ವಿಶ್ವ ನದಿ ದಿನವನ್ನಾಗಿ ಆಚರಿಸುತ್ತಿದ್ದು, ದೇಶಾದ್ಯಂತ ಜನರು ವರ್ಷದಲ್ಲಿ ಒಂದು ದಿನವಾದರೂ 'ನದಿ ಉತ್ಸವ'ವನ್ನು ಆಚರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಒತ್ತಾಯಿಸಿದರು.

ತಮಿಳು ನಾಡಿನ ನಾಗಾ ನದಿ ಬತ್ತಿಹೋಗಿದೆ. ಆದರೆ ಅಲ್ಲಿ ಗ್ರಾಮೀಣ ಭಾಗದ ಮಹಿಳೆಯರ ಶ್ರಮ-ಕೆಲಸಗಳಿಂದ ಮತ್ತು ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮತ್ತೆ ನದಿಯಲ್ಲಿ ನೀರು ತುಂಬಿದೆ ಎಂದು ಮಹಿಳೆಯರ ಸೇವೆಯನ್ನು ಕೊಂಡಾಡಿದರು.

ಭಾರತದ ಪಶ್ಚಿಮ ಭಾಗಗಳಲ್ಲಿ ವಿಶೇಷವಾಗಿ ಗುಜರಾತ್ ಮತ್ತು ರಾಜಸ್ತಾನಗಳಲ್ಲಿ ನೀರಿನ ಕೊರತೆಯಿದ್ದು ಬರಗಾಲ ಉಂಟಾಗಿದೆ. ಗುಜರಾತ್ ನಲ್ಲಿ ಮಳೆಗಾಲ ಆರಂಭದಲ್ಲಿ ಜನರು ಜಲ-ಜಿಲಾನಿ ಏಕಾದಶಿಯನ್ನು ಆಚರಿಸುತ್ತಾರೆ. ಮಳೆ ನೀರನ್ನು ಸಂಗ್ರಹಿಸಿ ಎಂದು ನಾವಿಂದು ಏನು ಕರೆಯುತ್ತೇವೆ ಅದೇ ರೀತಿ ಗುಜರಾತ್ ನಲ್ಲಿ ಜಲ ಜಿಲಾನಿ ಏಕಾದಶಿ ಆಚರಿಸುತ್ತಾರೆ ಎಂದರು.

ಬಿಹಾರ ಮತ್ತು ದೇಶದ ಇತರ ಪೂರ್ವ ಭಾಗಗಳಲ್ಲಿ ಛತ್ ಉತ್ಸವವನ್ನು ಆಚರಿಸಲಾಗುತ್ತದೆ. ನದಿ ತೀರಗಳನ್ನು ಸ್ವಚ್ಛಗೊಳಿಸುವುದು ಮತ್ತು ಘಾಟಿ ಪ್ರದೇಶಗಳನ್ನು ದುರಸ್ತಿಗೊಳಿಸುವ ಕೆಲಸ ಆರಂಭವಾಗಬೇಕು. ಸಾಮೂಹಿಕ ಪ್ರಯತ್ನ ಮೂಲಕ ಮತ್ತು ಎಲ್ಲರ ಸಹಕಾರದಿಂದ ನದಿಗಳನ್ನು ಮಾಲಿನ್ಯ ಮುಕ್ತಗೊಳಿಸಬೇಕು ಎಂದು ಕರೆ ನೀಡಿದರು.

ಉಡುಗೊರೆಗಳ ವಿಶೇಷ ಇ-ಹರಾಜು: ಇತ್ತೀಚಿನ ದಿನಗಳಲ್ಲಿ ನನಗೆ ವಿಶೇಷವಾಗಿ ಇ-ಹರಾಜು ಮೂಲಕ ಉಡುಗೊರೆಗಳು ಸಿಗುತ್ತಿವೆ. ಅವುಗಳನ್ನು ನಮಾಮಿ ಗಂಗಾ ಅಭಿಯಾನಕ್ಕೆ ಸಮರ್ಪಿಸುತ್ತೇವೆ ಎಂದು ತಿಳಿಸಿದರು.

ಗಾಂಧಿ ಜಯಂತಿಗೆ ಇನ್ನು ಕೇವಲ 5 ದಿನ ಬಾಕಿಯಿದೆ. ಬಾಪು ಅವರು ಸ್ವಚ್ಛತೆಗೆ ಪ್ರಮುಖ ಆದ್ಯತೆಯನ್ನು ನೀಡಿದ್ದರು. ಸ್ವಚ್ಛತೆಯನ್ನು ಸಾಮೂಹಿಕ ಅಭಿಯಾನವಾಗಿ ಮಾಡಿ ಅದನ್ನು ಸ್ವಾತಂತ್ರ್ಯದ ಕನಸಿನ ಜೊತೆಗೆ ಜೋಡಿಸಿಕೊಂಡಿದ್ದರು ಎಂದರು.

ನಾವು ಖಾದಿ ಉತ್ಪನ್ನಗಳನ್ನು ಖರೀದಿಸಿ ಗಾಂಧಿ ಜಯಂತಿಯನ್ನು ಸ್ಮರಣೀಯವಾಗಿ ಆಚರಿಸೋಣ ಎಂದು ಪ್ರಧಾನಿ ಕರೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com