ಗೋವಾ ಆಸ್ಪತ್ರೆಯ ಲಿಫ್ಟ್ ನಲ್ಲಿ ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ: ವಾರ್ಡ್ ಬಾಯ್ ಬಂಧನ

ಗೋವಾದ ಸರ್ಕಾರಿ ಆಸ್ಪತ್ರೆಯ ಲಿಫ್ಟ್ ನಲ್ಲಿ ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವಾರ್ಡ್ ಬಾಯ್ ನ್ನು ಬಂಧಿಸಲಾಗಿದೆ. 
ಬಂಧನ (ಸಾಂಕೇತಿಕ ಚಿತ್ರ)
ಬಂಧನ (ಸಾಂಕೇತಿಕ ಚಿತ್ರ)

ಪಣಜಿ: ಗೋವಾದ ಸರ್ಕಾರಿ ಆಸ್ಪತ್ರೆಯ ಲಿಫ್ಟ್ ನಲ್ಲಿ ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವಾರ್ಡ್ ಬಾಯ್ ನ್ನು ಬಂಧಿಸಲಾಗಿದೆ. 

ಸೆ.23 ಹಾಗೂ 25 ರಂದು ಇಬ್ಬರು ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ನೀಡಿದ್ದ. ಇಬ್ಬರು ಅಪ್ರಾಪ್ತ ಬಾಲಕಿಯರು (13, 14 ವಯಸ್ಸಿನವರು) ಉತ್ತರ ಗೋವಾ ಜಿಲ್ಲಾ ಆಸ್ಪತ್ರೆಗೆ ತಮ್ಮ ತಾಯಿಯನ್ನು ಚಿಕಿತ್ಸೆಗಾಗಿ ದಾಖಲಿಸಿದ್ದ ಹಿನ್ನೆಲೆಯಲ್ಲಿ ಆಗಾಗ್ಗೆ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು.

ವಾರ್ಡ್ ಬಾಯ್ ಕಳೆದ ಕೆಲವು ದಿನಗಳಿಂದ ಲಿಫ್ಟ್ ನಲ್ಲಿ ಈ ಅಪ್ರಾಪ್ತ ಬಾಲಕಿಯರನ್ನು ಹಿಂಬಾಲಿಸುವುದು ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು, ಬಾಲಕಿಯರ ಕುಟುಂಬ ಸದಸ್ಯರ ದೂರನ್ನು ಉಲ್ಲೇಖಿಸಿ ಹೇಳಿದ್ದಾರೆ.

ದೂರಿನ ಆಧಾರದಲ್ಲಿ 47 ವರ್ಷದ ಆರೋಪಿಯನ್ನು ಬಂಧಿಸಲಾಗಿದ್ದು ಪೋಸ್ಕೋ ಕಾಯ್ದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ನಡುವೆ ಮಪುಸದಲ್ಲಿ ಮಹಿಳಾ ರೋಗಿಗೆ ತನ್ನ ಕ್ಲಿನಿಕ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ವೈದ್ಯರ ವಿರುದ್ಧ ಸೆ.22 ರಂದು ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ವೈದ್ಯರು ತಪಾಸಣೆ ವೇಳೆ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು 
ಮಹಿಳೆ ದೂರಿನಲ್ಲಿ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com