ಅಖಾಡ ಪರಿಷತ್ ಮುಖ್ಯಸ್ಥರ ಆತ್ಮಹತ್ಯೆ: ಆನಂದಗಿರಿ, ಇನ್ನಿಬ್ಬರು ಆರೋಪಿಗಳು ಸಿಬಿಐ ವಶಕ್ಕೆ

ಅಖಾಡ ಪರಿಷತ್ ನ ಮುಖ್ಯಸ್ಥರಾಗಿದ್ದ ನರೇಂದ್ರ ಗಿರಿ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಪ್ರಾಥಮಿಕವಾಗಿ ಆರೋಪ ಎದುರಿಸುತ್ತಿರುವ ಮೃತರ ಶಿಷ್ಯ ಆನಂದ ಗಿರಿ ಹಾಗೂ ಇನ್ನಿಬ್ಬರನ್ನು ಅಲ್ಲಹಾಬಾದ್ ಹೈಕೋರ್ಟ್ ಸಿಬಿಐ ವಶಕ್ಕೆ ನೀಡಿದೆ.
ಆರೋಪಿ ಆನಂದ ಗಿರಿ
ಆರೋಪಿ ಆನಂದ ಗಿರಿ

ಪ್ರಯಾಗ್ ರಾಜ್: ಅಖಾಡ ಪರಿಷತ್ ನ ಮುಖ್ಯಸ್ಥರಾಗಿದ್ದ ನರೇಂದ್ರ ಗಿರಿ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಪ್ರಾಥಮಿಕವಾಗಿ ಆರೋಪ ಎದುರಿಸುತ್ತಿರುವ ಮೃತರ ಶಿಷ್ಯ ಆನಂದ ಗಿರಿ ಹಾಗೂ ಇನ್ನಿಬ್ಬರನ್ನು ಅಲ್ಲಹಾಬಾದ್ ಹೈಕೋರ್ಟ್ ಸಿಬಿಐ ವಶಕ್ಕೆ ನೀಡಿದೆ.

ನರೇಂದ್ರ ಗಿರಿ ಅವರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅಡಿಯಲ್ಲಿ ಆನಂದಗಿರಿ ಹಾಗೂ ಇನ್ನಿಬ್ಬರನ್ನು ಬಂಧಿಸಲಾಗಿದೆ.

ನರೇಂದ್ರ ಗಿರಿ ಅವರ ದೇಹ ಕಳೆದ ವಾರ ನೇಣುಬಿಗಿದ ಸ್ಥಿತಿಯಲ್ಲಿ ತಮ್ಮ ಮಠದಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ ಸಂಬಂಧ ಬಡೆ ಹನುಮಾನ್ ದೇವಾಲಯದ ಅರ್ಚಕ ಆದ್ಯ ಪ್ರಸಾದ್ ತಿವಾರಿ ಹಾಗೂ ಆತನ ಪುತ್ರ ಸಂದೀಪ್ ಬಂಧಿತ ಇನ್ನಿತರ ಆರೋಪಿಗಳಾಗಿದ್ದಾರೆ. ಈ ಮೂವರನ್ನೂ ಮುಖ್ಯ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಹರೇಂದ್ರ ನಾಥ್ ಅವರು ಸಿಬಿಐ ಕಸ್ಟಡಿಗೆ ಕಳಿಸಿದ್ದಾರೆ.

ಜಿಲ್ಲಾ ಪ್ರಾಸಿಕ್ಯೂಷನ್ ಕೌನ್ಸಿಲ್ ಗುಲಾಬ್ ಚಂದ್ರ ಅಗ್ರಹಾರಿ ಈ ಬಗ್ಗೆ ಮಾಹಿತಿ ನೀಡಿದ್ದು, ಮೂವರೂ ಆರೋಪಿಗಳು ನೈನಿ ಜೈಲ್ ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರೆಂದು ತಿಳಿಸಿದ್ದಾರೆ.

ಆರೋಪಿಗಳ ಸಿಬಿಐ ಕಸ್ಟಡಿ ಸೆ.28 ರ ಬೆಳಿಗ್ಗೆ 9 ರಿಂದ ಪ್ರಾರಂಭಗೊಂಡು ಅ.04 ರ ಸಂಜೆ 5 ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ವಕೀಲರು ತಿಳಿಸಿದ್ದಾರೆ. ನರೇಂದ್ರ ಗಿರಿ ಅವರ ಮೃತದೇಹದ ಬಳಿ ಪತ್ತೆಯಾಗಿದ್ದ ಪತ್ರದಲ್ಲಿ ಈ ಮೂವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪವಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com