ಹೊಸ ಆವೃತ್ತಿಯ ಆಕಾಶ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ: ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ

ಆಕಾಶ್ ಕ್ಷಿಪಣಿಯ ಹೊಸ ಆವೃತ್ತಿಯನ್ನು ಸೆ.27 ರಂದು ಒಡಿಶಾದ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಿಂದ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿದೆ.
ಹೊಸ ಆವೃತ್ತಿಯ ಆಕಾಶ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ
ಹೊಸ ಆವೃತ್ತಿಯ ಆಕಾಶ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ

ಒಡಿಶಾ: ಆಕಾಶ್ ಕ್ಷಿಪಣಿಯ ಹೊಸ ಆವೃತ್ತಿಯನ್ನು ಸೆ.27 ರಂದು ಒಡಿಶಾದ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಿಂದ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿದೆ.

ಕ್ಷಿಪಣಿ- ಆಕಾಶ್ ಪ್ರೈಮ್ ಎಂದು ಇದಕ್ಕೆ ನಾಮಕರಣ ಮಾಡಲಾಗಿದ್ದು, ತನ್ನ ಮೊದಲ ಪರೀಕ್ಷೆಯಲ್ಲಿ ಶತ್ರು ಯುದ್ಧವಿಮಾನದ ಮಾದರಿಯಲ್ಲಿದ್ದ ಮಾನವ ರಹಿತ ವೈಮಾನಿಕ ಟಾರ್ಗೆಟ್ ನ್ನು ಈ ಕ್ಷಿಪಣಿ ನಾಶ ಮಾಡುವುದರಲ್ಲಿ ಯಶಸ್ವಿಯಾಗಿದೆ.

ವಿಮಾನ ಸುಮಾರು 4:30 ರ ವೇಳೆಗೆ ಪರೀಕ್ಷೆಗೊಳಪಟ್ಟಿತು.

ಈಗಿರುವ ಆಕಾಶ್ ವ್ಯವಸ್ಥೆಗೆ ಹೋಲಿಕೆ ಮಾಡಿದಲ್ಲಿ, ಆಕಾಶ್ ಪ್ರೈಮ್ ದೇಶೀಯ ಸಕ್ರಿಯ ಆರ್ ಎಫ್ ಸೀಕರ್ ನ್ನು ಹೊಂದಿದ್ದು, ಹೆಚ್ಚಿನ ನಿಖರತೆ ಇದೆ. ಎತ್ತರದ ಪ್ರದೇಶಗಳಲ್ಲಿ, ಕಡಿಮೆ ತಾಪಮಾನದ ವಾತಾವರಣಗಳಲ್ಲಿ ಈ ಕ್ಷಿಪಣಿ ಕಾರ್ಯನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದ್ದು ಸೇನೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ. 

ಈ ಯಶಸ್ಸಿಗಾಗಿ ಡಿಆರ್ ಡಿಒ, ಭಾರತೀಯ ಸೇನೆ, ವಾಯುಪಡೆ ಹಾಗೂ ಇನ್ನಿತರ ಸಂಬಂಧಿಸಿದ ಇಲಾಖೆಗಳಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com