ಹಣ ದುರ್ಬಳಕೆ: ತಮಿಳುನಾಡು ಮಾಜಿ ಸಚಿವೆ ಇಂದಿರಾ ಕುಮಾರಿಗೆ ಐದು ವರ್ಷ ಜೈಲು
ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರು/ಶಾಸಕರ ವಿರುದ್ಧದ ಪ್ರಕರಣಗಳ ವಿಶೇಷ ನ್ಯಾಯಾಲಯ ಬುಧವಾರ ತಮಿಳುನಾಡು ಮಾಜಿ ಸಚಿವೆ ಆರ್ ಇಂದಿರಾ ಕುಮಾರಿ ಮತ್ತು ಆಕೆಯ ಪತಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು,
Published: 29th September 2021 04:50 PM | Last Updated: 29th September 2021 04:50 PM | A+A A-

ಅಸ್ವಸ್ಥಗೊಂಡ ಇಂದಿರಾ ಕುಮಾರಿ
ಚೆನ್ನೈ: ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರು/ಶಾಸಕರ ವಿರುದ್ಧದ ಪ್ರಕರಣಗಳ ವಿಶೇಷ ನ್ಯಾಯಾಲಯ ಬುಧವಾರ ತಮಿಳುನಾಡು ಮಾಜಿ ಸಚಿವೆ ಆರ್ ಇಂದಿರಾ ಕುಮಾರಿ ಮತ್ತು ಆಕೆಯ ಪತಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ನಿವೃತ್ತ ಅಧಿಕಾರಿ ಷಣ್ಮುಗಂ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಅಲಿಸಿಯಾ ಅವರು, ಇಂದಿರಾ ಕುಮಾರಿ ಮತ್ತು ಅವರ ಪತಿ ಬಾಬುಗೆ ಐದು ವರ್ಷ ಮತ್ತು ನಿವೃತ್ತ ಅಧಿಕಾರಿ ಷಣ್ಮುಗಂಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದರು. ಅಲ್ಲದೆ ಇಂದಿರಾ ಕುಮಾರಿಯ ವೈಯಕ್ತಿಕ ಸಹಾಯಕರಾಗಿದ್ದ ವೆಂಕಟಕೃಷ್ಣನ್ ಅವರಿಗೆ 10,000 ರೂ ದಂಡ ವಿಧಿಸಿ ಖುಲಾಸೆಗೊಳಿಸಿದ್ದಾರೆ.
ಇಂದಿರಾಯ ಕುಮಾರ್ ಅವರು ವಿಕಲಚೇತನರಿಗಾಗಿ ಶಾಲೆ ಸ್ಥಾಪಿಸಲು ಇಂದಿರಾ ಕುಮಾರಿಯವರ ಪತಿ ಬಾಬು ನಡೆಸುತ್ತಿರುವ ಟ್ರಸ್ಟ್‌ಗೆ ನೀಡಲಾದ 15.45 ಲಕ್ಷ ರೂಪಾಯಿಗಳ ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡಿದ್ದರು.
ಜೆ.ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ 1991-96ರವರೆಗೆ ಇಂದಿರಾ ಕುಮಾರಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದರು. ಹಲವು ವರ್ಷಗಳ ನಂತರ, ಅವರು ಡಿಎಂಕೆ ಸೇರಿದ್ದರು.
ತೀರ್ಪು ಪ್ರಕಟವಾದ ತಕ್ಷಣ, ನ್ಯಾಯಾಲಯದ ಸಭಾಂಗಣದಲ್ಲಿದ್ದ ಇಂದಿರಾ ಕುಮಾರಿ ಅಸ್ವಸ್ಥಗೊಂಡು ಉಸಿರಾಟದ ತೊಂದರೆ ಎದುರಿಸುತ್ತಿರುವುದಾಗಿ ಹೇಳಿದರು. ಹೀಗಾಗಿ ಅವರನ್ನು ಜೈಲಿಗೆ ಕರೆದುಕೊಂಡು ಹೋಗುವ ಬದಲು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.