ಆಯುಷ್ ಸಚಿವಾಲಯದಿಂದ ಮಕ್ಕಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಿಟ್

ಕೋವಿಡ್ ಮೂರನೇ ಅಲೆಯ ಆತಂಕದ ನಡುವೆಯೇ, ಅಖಿಲ ಭಾರತ ಆಯುರ್ವೇದ ಇನ್ಸ್ಟಿಟ್ಯೂಟ್(ಎಐಐಎ) 16 ವರ್ಷದ ಮಕ್ಕಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ 'ಬಾಲ ರಕ್ಷಾ ಕಿಟ್' ಅನ್ನು ಸಿದ್ಧಪಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್ ಮೂರನೇ ಅಲೆಯ ಆತಂಕದ ನಡುವೆಯೇ, ಅಖಿಲ ಭಾರತ ಆಯುರ್ವೇದ ಇನ್ಸ್ಟಿಟ್ಯೂಟ್(ಎಐಐಎ) 16 ವರ್ಷದೊಳಗಿನ ಮಕ್ಕಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ 'ಬಾಲ ರಕ್ಷಾ ಕಿಟ್' ಅನ್ನು ಸಿದ್ಧಪಡಿಸಿದೆ.

ಎಐಐಎ ಆಯುಷ್ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಕೊರೋನಾ ವಿರುದ್ಧ ಹೋರಾಡಲು ಮತ್ತು ಅವರನ್ನು ಆರೋಗ್ಯವಾಗಿಡಲು ಸಹಾಯ ಮಾಡಲು ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಕಿಟ್ ಸಹಾಯ ಮಾಡುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಿಟ್ ತುಳಸಿ, ಗಿಲೋಯ್, ದಾಲ್ಚಿನ್ನಿ, ಲಿಕ್ಕರ್ ಮತ್ತು ಒಣ ದ್ರಾಕ್ಷಿಯಿಂದ ಕೂಡಿದ ಸಿರಪ್ ಅನ್ನು ಒಳಗೊಂಡಿದೆ. ಇದು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಜೊತೆಗೆ ಅಣ್ಣು ಎಣ್ಣೆ, ಸೀತೋಪಲಾಡಿ ಮತ್ತು ಚ್ಯವನಪ್ರಾಶ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಯುಷ್ ಸಚಿವಾಲಯದ ಕಟ್ಟುನಿಟ್ಟಿನ ಮಾರ್ಗದರ್ಶನದಡಿಯಲ್ಲಿ ಈ ಕಿಟ್ ಅನ್ನು ತಯಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಉತ್ತರಾಖಂಡ ಮೂಲದ ಸರ್ಕಾರಿ ಸ್ವಾಮ್ಯದ ಇಂಡಿಯನ್ ಮೆಡಿಸಿನ್ಸ್ ಫಾರ್ಮಾಸ್ಯುಟಿಕಲ್ ಕಾರ್ಪೊರೇಷನ್ ಲಿಮಿಟೆಡ್(IMPCL)ತಯಾರಿಸಿದೆ.

ಎಐಐಎ ನವೆಂಬರ್ 2 ರಂದು ರಾಷ್ಟ್ರೀಯ ಆಯುರ್ವೇದ ದಿನದಂದು 10,000 ಉಚಿತ ಕಿಟ್‌ಗಳನ್ನು ವಿತರಿಸಲಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com