ಇದೆಲ್ಲಾ ಸಾಕು, ಸಿಎಂ ಅಧಿಕಾರಕ್ಕೆ ಧಕ್ಕೆ ತರುವ ಯತ್ನ ಕೊನೆಗೊಳ್ಳಬೇಕು: ಸುನಿಲ್ ಜಾಖರ್
ಪಂಜಾಬ್ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಗೊಂದಲದ ನಡುವೆ, ಪಂಜಾಬ್ ಮುಖ್ಯಮಂತ್ರಿಯ ಅಧಿಕಾರವನ್ನು ಪದೇ ಪದೇ ದುರ್ಬಲಗೊಳಿಸುವ ಪ್ರಯತ್ನಗಳಿಗೆ ಅಂತ್ಯಹಾಡಬೇಕು ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಮಾಜಿ...
Published: 30th September 2021 03:46 PM | Last Updated: 30th September 2021 04:11 PM | A+A A-

ಸುನಿಲ್ ಜಾಖರ್
ಚಂಡೀಗಢ: ಪಂಜಾಬ್ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಗೊಂದಲದ ನಡುವೆ, ಪಂಜಾಬ್ ಮುಖ್ಯಮಂತ್ರಿಯ ಅಧಿಕಾರವನ್ನು ಪದೇ ಪದೇ ದುರ್ಬಲಗೊಳಿಸುವ ಪ್ರಯತ್ನಗಳಿಗೆ ಅಂತ್ಯಹಾಡಬೇಕು ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನಿಲ್ ಜಾಖರ್ ಅವರು ಗುರುವಾರ ಹೇಳಿದ್ದಾರೆ.
ನವಜೋತ್ ಸಿಂಗ್ ಸಿಧು ಅವರು ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿಯನ್ನು ಭೇಟಿ ಮಾಡಿ ಮಾತುಕತೆ ನಡೆಸುವುದಾಗಿ ಘೋಷಿಸಿದ ನಂತರ ಜಾಖರ್ ಅವರು ಈ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ: ಪಂಜಾಬ್ ಸಿಎಂ ಆಗಿ ಚರಣಜಿತ್ ಸಿಂಗ್ ಚನ್ನಿ ನೇಮಕ ಮಾಡಿದ್ದು ರಾಹುಲ್ ಗಾಂಧಿಯ ದಿಟ್ಟ ನಿರ್ಧಾರ: ಸುನಿಲ್ ಜಾಖರ್
ರಾಜ್ಯದ ಅಡ್ವೋಕೇಟ್ ಜನರಲ್ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರ ನೇಮಕಾತಿಗೆ ಆಕ್ಷೇಪ ವ್ಯಕ್ತಪಡಿಸುವುದು ಮುಖ್ಯಮಂತ್ರಿಗಳ ಸಮಗ್ರತೆಯನ್ನು ಪ್ರಶ್ನಿಸಿದಂತೆ ಎಂದು ಜಾಖರ್ ಹೇಳಿದ್ದಾರೆ.
"ಸಾಕು. ಸಿಎಂ ಅಧಿಕಾರವನ್ನು ಹಾಳು ಮಾಡುವ ಪ್ರಯತ್ನಗಳಿಗೆ ಅಂತ್ಯ ಹಾಡಿ. ಎಜಿ ಮತ್ತು ಡಿಜಿಪಿ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ವಾಸ್ತವವಾಗಿ ಸಿಎಂ ಮತ್ತು ಗೃಹ ಸಚಿವರ ಸಮಗ್ರತೆ/ಸಾಮರ್ಥ್ಯವನ್ನು ಪ್ರಶ್ನಿಸುತ್ತಿದೆ. ಇದಕ್ಕೆ ಅಂತ್ಯಹಾಡಬೇಕು" ಎಂದು ಜಾಖರ್ ಟ್ವೀಟ್ ಮಾಡಿದ್ದಾರೆ.
ಪೊಲೀಸ್ ಮಹಾನಿರ್ದೇಶಕರು ಮತ್ತು ರಾಜ್ಯದ ಅಡ್ವೋಕೇಟ್ ಜನರಲ್ ನೇಮಕಾತಿಯನ್ನು ನವಜೋತ್ ಸಿಂಗ್ ಸಿಧು ಅವರು ಪ್ರಶ್ನಿಸಿದ್ದರು.