ಡಿಜೆ ಸೆಟ್ ಗೆ ಹಾಕಿದ್ದ ಜನರೇಟರ್ ನಲ್ಲಿ ವೈರಿಂಗ್ ಸಮಸ್ಯೆ, ವಿದ್ಯುತ್ ಶಾಕ್ ನಿಂದ ವಾಹನದಲ್ಲಿದ್ದ 10 ಮಂದಿ ಸಜೀವ ದಹನ

ಡಿಜೆ ಸೆಟ್ ಗೆ ಹಾಕಿದ್ದ ಜನರೇಟರ್ ನಲ್ಲಿ ವೈರಿಂಗ್ ಸಮಸ್ಯೆಯಿಂದಾಗಿ ಉಂಟಾದ ವಿದ್ಯುತ್ ಶಾಕ್ ನಿಂದ ಪಿಕಪ್ ವಾಹನದಲ್ಲಿದ್ದ 10 ಮಂದಿ ಪ್ರಯಾಣಿಕರು ಧಾರುಣವಾಗಿ ಸಜೀವ ದಹನವಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೂಚ್ ಬೆಹಾರ್: ಡಿಜೆ ಸೆಟ್ ಗೆ ಹಾಕಿದ್ದ ಜನರೇಟರ್ ನಲ್ಲಿ ವೈರಿಂಗ್ ಸಮಸ್ಯೆಯಿಂದಾಗಿ ಉಂಟಾದ ವಿದ್ಯುತ್ ಶಾಕ್ ನಿಂದ ಪಿಕಪ್ ವಾಹನದಲ್ಲಿದ್ದ 10 ಮಂದಿ ಪ್ರಯಾಣಿಕರು ಧಾರುಣವಾಗಿ ಸಜೀವ ದಹನವಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಕೂಚ್​ ಬೆಹಾರ್ ಜಿಲ್ಲೆಯಲ್ಲಿ ಜಲ್ಪೇಶ್​ಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಪಿಕಪ್ ವಾಹನಕ್ಕೆ ವಿದ್ಯುತ್ ಪ್ರವಹಿಸಿ ಅದರಲ್ಲಿದ್ದ 10 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಂತೆಯೇ ಇತರ 16 ಮಂದಿ ಗಾಯಗೊಂಡಿಡ್ಡಾರೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಜಲ್​ಪೈಗುರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಡು ಹಾಕಲೆಂದು ಪಿಕಪ್ ವಾಹನಕ್ಕೆ ಡಿಜೆ ಸಿಸ್ಟಮ್​ ಅಳವಡಿಸಲಾಗಿತ್ತು. ಇದೇ ಡಿಜೆ ಸಿಸ್ಟಮ್​ಗಾಗಿ ಬಳಸುತ್ತಿದ್ದ ಜನರೇಟರ್​ನ ವೈರಿಂಗ್​ನಲ್ಲಿ ಉಂಟಾದ ಸಮಸ್ಯೆಯೇ ವಿದ್ಯುತ್ ಪ್ರವಹಿಸಲು ಮುಖ್ಯ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

‘ಮಧ್ಯರಾತ್ರಿ 12 ಗಂಟೆ ವೇಳೆಯಲ್ಲಿ ಮೆಖ್ಲಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಜಲ್ಪೇಶ್​ಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಪಿಕಪ್ ವಾಹನಕ್ಕೆ ವಿದ್ಯುತ್ ಪ್ರವಹಿಸಿದೆ. ಘಟನೆಗೆ ಜನರೇಟರ್​ನ ವೈರಿಂಗ್ ಸಮಸ್ಯೆ ಕಾರಣ ಎಂದು ಶಂಕಿಸಲಾಗಿದೆ. ಜನರೇಟರ್ ಅನ್ನು ವಾಹನದ ಹಿಂಭಾಗದಲ್ಲಿ ಅಳವಡಿಸಲಾಗಿತ್ತು. ಮಳೆಯಿಂದಾಗಿ ಜನರೇಟರ್ ಗೆ ನೀರು ನುಗ್ಗಿ ವೈರಿಂಗ್ ಸಮಸ್ಯೆ ಉಂಟಾಗಿರಬಹುದು’ ಎಂದು ಮಾತಭಂಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ವರ್ಮಾ ಹೇಳಿದರು.

ಗಾಯಾಳುಗಳನ್ನು ತಕ್ಷಣವೇ ಚಂದ್ರಬಂಧಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಪ್ರಾಥಮಿಕ ಚಿಕಿತ್ಸೆ ಕೊಟ್ಟ ಸ್ಥಾನಿಕ ವೈದ್ಯಾಧಿಕಾರಿಯು ಅವರನ್ನು ಜಲ್​ಪೈಗುರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಂತೆ ಶಿಫಾರಸು ಮಾಡಿದರು. ಆಸ್ಪತ್ರೆಗೆ ಕರೆತರುವ ಮಾರ್ಗದಲ್ಲಿಯೇ 10 ಮಂದಿ ಮೃತಪಟ್ಟಿದ್ದರು ಎಂದು ವೈದ್ಯರು ಹೇಳಿದ್ದಾರೆ. ಘಟನೆಗೆ ಕಾರಣವಾದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಚಾಲಕ ಪರಾರಿಯಾಗಿದ್ದಾನೆ. ಮೃತರು ಮತ್ತು ಗಾಯಾಳುಗಳೆಲ್ಲರೂ ಸಿತಾಲ್​ಕುಚಿ ಪ್ರದೇಶಕ್ಕೆ ಸೇರಿದವರು. ಎಲ್ಲರ ಕುಟುಂಬಗಳಿಗೂ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com