ರಾಜಸ್ಥಾನದ ಖಾಟು ಶ್ಯಾಮ್ ದೇವಸ್ಥಾನದಲ್ಲಿ ಕಾಲ್ತುಳಿತದಿಂದ ಮೂವರು ಸಾವು: ಎಸ್‌ಎಚ್‌ಒ ಅಮಾನತು

ರಾಜಸ್ಥಾನದ ಸಿಕಾರ್‌ ಪಟ್ಟಣದ ಖಾಟು ಶ್ಯಾಮ್ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಖಾಟು ಶ್ಯಾಮ್ ಜಿ ಪೊಲೀಸ್ ಠಾಣೆಯ...
ಖಾಟು ಶ್ಯಾಮ್ ದೇವಸ್ಥಾನ
ಖಾಟು ಶ್ಯಾಮ್ ದೇವಸ್ಥಾನ
Updated on: 

ಜೈಪುರ: ರಾಜಸ್ಥಾನದ ಸಿಕಾರ್‌ ಪಟ್ಟಣದ ಖಾಟು ಶ್ಯಾಮ್ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಖಾಟು ಶ್ಯಾಮ್ ಜಿ ಪೊಲೀಸ್ ಠಾಣೆಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಖಾಟು ಶ್ಯಾಮ್‌ಜಿ ದೇವಾಲಯದಲ್ಲಿ ಮಾಸಿಕ ಜಾತ್ರೆಯ ವೇಳೆ ನೂಕುನುಗ್ಗಲು ಉಂಟಾಗಿ ಈ ದುರಂತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಜೈಪುರ ಆಸ್ಪತ್ರೆಗೆ ದಾಖಲಿಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ದೇವಾಲಯದ ಹೊರಗೆ ಜನದಟ್ಟಣೆ ಹೆಚ್ಚು ಇದ್ದಾಗ "ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದ ಠಾಣಾಧಿಕಾರಿ ರಿಯಾ ಚೌಧರಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಿಕರ್ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಷ್ಟ್ರದೀಪ್ ಅವರು ತಿಳಿಸಿದ್ದಾರೆ.

ದೇವಸ್ಥಾನದ ಹೊರಗೆ ಭಾರೀ ಜನಜಂಗುಳಿ ಇತ್ತು. ದೇವಸ್ಥಾನದ ದ್ವಾರ ತೆರೆಯುತ್ತಿದ್ದಂತೆಯೇ ನೂಕು ನುಗ್ಗಲು ಉಂಟಾಗಿ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಿಲ್ಲ. ಹೀಗಾಗಿ ಎಸ್‌ಎಚ್‌ಒ ರಿಯಾ ಚೌಧರಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com